Tue. Dec 24th, 2024

ಕೊತ ಕೊತ ಕುದಿಯುತ್ತಿದೆ ಬೆಂಗಳೂರು, ಸಿಲಿಕಾನ್ ಸಿಟಿಯಲ್ಲಿ ಶೂನ್ಯ ಮಳೆ

Bengaluru Temperature
Share this with Friends

ಬೆಂಗಳೂರು.ಎ.4 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದೆ. ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ. ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ 7.1ಮಿ.ಮೀ ಹಾಗೂ ಮಾರ್ಚ್‌ನಲ್ಲಿ 14.7ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಎರಡು ತಿಂಗಳಿನಲ್ಲಿ ಒಂದು ಹನಿಯು ಮಳೆಯಾಗದೇ ಶೂನ್ಯ ದಾಖಲೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ವಾಡಿಕೆಯ ಪ್ರಕಾರ ಏಪ್ರಿಲ್‌ನಲ್ಲಿ 61.7 ಮೀ ಮಳೆಯಾಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಏಪ್ರಿಲ್ ಮಧ್ಯದವರೆಗೂ ಮಳೆಯಾಗುವ ಸುಳಿವಿಲ್ಲ.

ಬೆಂಗಳೂರಿನಲ್ಲಿ ಮತ್ತೆ ಎರಡು ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ.

ಆರ್‌ಆರ್ ನಗರ – 38.60 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಪೂರ್ವ- 37 ಡಿಗ್ರಿ ಸೆಲ್ಸಿಯಸ್, ಯಲಹಂಕ – 34.90 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣ – 35.90 ಡಿಗ್ರಿ ಸೆಲ್ಸಿಯಸ್, ದಾಸರಹಳ್ಳಿ – 36.60 ಡಿಗ್ರಿ ಸೆಲ್ಸಿಯಸ್, ಬೊಮ್ಮನಹಳ್ಳಿ – 36.70, ಮಹಾದೇವಪುರ – 34.80 ಡಿಗ್ರಿ ಸೆಲ್ಸಿಯಸ್, ಪಶ್ಚಿಮ ವಲಯ – 35.40 ಡಿಗ್ರಿ ಸೆಲ್ಸಿಯಸ್.


Share this with Friends

Related Post