Tue. Dec 24th, 2024

ಐಫೋನ್‌, ಐಪ್ಯಾಡ್ಸ್‌ ಮ್ಯಾಕ್‌ಬುಕ್ ಬಳಕೆದಾರರೆ ಹುಷಾರ್..!

Apple, Google products
Share this with Friends

ಹೊಸದಿಲ್ಲಿ.ಎ.4: ಭಾರತದಲ್ಲಿ ಅತಿ ಹೆಚ್ಚು ಜನ ಆ್ಯಪಲ್‌ ಕಂಪನಿಯ ಐಫೋನ್‌ ಸೇರಿ ಹತ್ತಾರು ಉತ್ಪನ್ನಗಳನ್ನು ಬಳಸುತ್ತಿದ್ದು, ಆ್ಯಪಲ್‌ ಕಂಪನಿಯ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ.

ರಿಮೋಟ್‌ ಕೋಡ್‌ ಎಕ್ಸಿಕ್ಯೂಷನ್‌ಗೆ ಕನೆಕ್ಷನ್‌ ಮಾಡುವಾಗ ಏರುಪೇರಾಗಿದೆ. ಇದರಿಂದಾಗಿ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ ಬಳಸುವುದು ಅಪಾಯಕಾರಿಯಾಗಿದೆ ಎಂದು ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ ಎಚ್ಚರಿಕೆ ನೀಡಿದ್ದು, ಆ್ಯಪಲ್‌ ಸಫಾರಿ ವರ್ಷನ್‌ಗಳಾದ 17.4.1, Apple macOS Ventura ವರ್ಷನ್‌ಗಳು, Apple macOS Sonoma ವರ್ಷನ್‌ಗಳು, iPadOS ವರ್ಷನ್‌ಗಳ ಬಳಕೆಯಲ್ಲಿ ಭಾರಿ ಪ್ರಮಾಣದ ಸಮಸ್ಯೆಯುಂಟಾಗಿದೆ ಎಂದು ಮಾಹಿತಿ ನೀಡಿದೆ.

ಐಫೋನ್‌, ಐಪ್ಯಾಡ್‌ ಮತ್ತು ಮ್ಯಾಕ್‌ಬುಕ್‌ ಸೇರಿದಂತೆ ಆ್ಯಪಲ್‌ ಸಂಸ್ಥೆಯ ಉಪಕರಣಗಳ ಬಳಕೆದಾರರಿಗೆ ಕೇಂದ್ರ ಸರಕಾರ ‘ಭಾರಿ ಅಪಾಯ’ದ (ಹೈ ರಿಸ್ಕ್‌) ಎಚ್ಚರಿಕೆ ನೀಡಿದೆ.ಡೇಟಾ ಕಳವು, ಖಾಸಗಿ ಮಾಹಿತಿ ಸೋರಿಕೆ ಸೇರಿದಂತೆ ಹಲವು ಅಪಾಯಗಳ ಹಿನ್ನೆಲೆಯಲ್ಲಿ, ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಕೇಂದ್ರ ಸರಕಾರದ ‘ಭಾರತೀಯ ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ’ (ಸಿಇಆರ್‌ಟಿ- ಇನ್‌) ಎಚ್ಚರಿಕೆ ಸೂಚಿಸಿದೆ.

ಆ್ಯಪಲ್‌ ಸಂಸ್ಥೆಯ ಉಪಕರಣಗಳಲ್ಲಿ ಬಳಸಲಾಗಿರುವ ಹಾರ್ಡ್‌ವೇರ್‌ಗಳು ಹಾಗೂ ‘ಐಒಎಸ್‌’, ‘ಸಫಾರಿ, ಮ್ಯಾಕ್‌ ಓಎಸ್‌ ‘ವೆಂಚುರಾ’, ‘ಸೊನೊಮಾ’ ಸೇರಿದಂತೆ ಹಲವು ತಂತ್ರಾಂಶಗಳೂ ಹ್ಯಾಕರ್‌ಗಳಿಂದ ದಾಳಿಗೆ ಒಳಗಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಬಹುದೂರದಲ್ಲಿರುವ ಹ್ಯಾಕರ್‌ಗಳು ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ ಹ್ಯಾಕ್‌ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ದೂರದಿಂದಲೇ ಹ್ಯಾಕರ್‌ಗಳು ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ಹ್ಯಾಕ್‌ ಮಾಡಿ, ಹಣ ಎಗರಿಸುವ ಜತೆಗೆ ವೈಯಕ್ತಿಕ ಮಾಹಿತಿಯನ್ನೂ ಕದಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿಯನ್ನು ನೀಡಿದೆ.

ಇದೇ ವೇಳೆ, ಐಫೋನ್‌, ಐಪ್ಯಾಡ್‌, ಮ್ಯಾಕ್‌ಬುಕ್‌ ಬಳಕೆದಾರರು ತಮ್ಮ ಓಎಸ್‌ (ಆಪರೇಟಿಂಗ್‌ ಸಿಸ್ಟಮ್‌) ಅಪ್‌ಡೇಟ್‌ ಮಾಡಿಕೊಳ್ಳಬೇಕೆಂದು ‘ಸಿಇಆರ್‌ಟಿ- ಇನ್‌’ ಸೂಚಿಸಿದೆ.


Share this with Friends

Related Post