Tue. Dec 24th, 2024

ಹೆಚ್. ವಿಶ್ವನಾಥ್ ಬಿಜೆಪಿಯವರು,ಆಪಕ್ಷದ ಅಭ್ಯರ್ಥಿ ಪರ ನಿಲ್ಲೋದು ಸಹಜ:ಲಕ್ಷ್ಮಣ್

Share this with Friends

ಮೈಸೂರು, ಏ.4: ಹೆಚ್. ವಿಶ್ವನಾಥ್ ಈಗಾಗಲೇ ಬಿಜೆಪಿಯಿಂದ ಎಂಎಲ್ ಸಿ ಆಗಿದ್ದಾರೆ. ಅವರು ಆ ಪಕ್ಷದವರು, ಹಾಗಾಗಿ ಅವರ ಅಭ್ಯರ್ಥಿ ಪರ ನಿಲ್ಲುವುದು ಸಹಜ‌ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ಲಕ್ಷ್ಮಣ್ ತಿಳಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಹೆಚ್.ವಿಶ್ವನಾಥ್ ಬ್ಯಾಟ್ ಬೀಸಿರುವ ವಿಚಾರ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು,ವಿಶ್ವನಾಥ್ ನಮ್ಮ ಪಕ್ಷದವರಲ್ಲ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದರು.

ನನ್ನ ಪರವಾಗಿ ಸಿಎಂ, ಡಿಸಿಎಂ ನಮ್ಮ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು,ಜನಪರ ಆಡಳಿತ ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ನನ್ನ ಸ್ನೇಹಿತ, ಸೈದ್ದಾಂತಿಕವಾಗಿ ನಮ್ಮ‌ಲ್ಲಿ ಭಿನ್ನಾಭಿಪ್ರಾಯ ಇರಬಹುದು. ನಾವು ಹೊರಗಡೆ ಬಂದರೆ ಜೊತೆಗೆ ಕೂತು ಕಾಫಿ ಕುಡಿಯುತ್ತೇವೆ. ಫೋನಿನಲ್ಲಿ ಮಾತಾಡುತ್ತೇವೆ ಬೇಕಾದರೆ ಈಗಲೇ ಫೋನ್ ಮಾಡಲಾ ಎಂದು ಮಾಧ್ಯಮದವರನ್ನೇ ಕೇಳಿದರು ಲಕ್ಷ್ಮಣ್.

ಪ್ರತಾಪ್ ಸಿಂಹ ಸುಮ್ಮನೆ ರಾಜಕೀಯವಾಗಿ ನನ್ನನ್ನ ಟೀಕೆ ಮಾಡ್ತಾರೆ ಅಷ್ಟೇ. ಅವರು ನಾನು ಒಕ್ಕಲಿಗ ಅಲ್ಲಾ ಅನ್ನೋದಾದರೆ ಅದನ್ನ ಸಾಬೀತು ಪಡಿಸಲಿ, ಜೊತೆಗೆ ನನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ಆದಷ್ಟು ಬೇಗ ಕಳುಹಿಸಲಿ. ನನ್ನ ಬಗ್ಗೆ ಮಾತನಾಡುವ ಬದಲು ಅವರಿಗೆ ಟಿಕೆಟ್ ಮಿಸ್ ಮಾಡಿದ್ದು ಯಾರು ಅಂತ ಹೇಳಲಿ ಎಂದು ಎಂ. ಲಕ್ಷ್ಮಣ್ ಸವಾಲು ಹಾಕಿದರು.


Share this with Friends

Related Post