Sat. Apr 19th, 2025

ಮಹಿಳೆಯರಿಗೆ ಹೆಚ್ಚು ಸ್ಥಾನಮಾನ ಕೊಟ್ಟಿದ್ದು ಬಿಜೆಪಿ:ಗೋಪಾಲ್ ರಾಜ್ ಅರಸ್

Share this with Friends

ಮೈಸೂರು,ಏ.4: ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ನೀಡಲು ಮಹತ್ವದ ಯೋಜನೆಯನ್ನು ಬಿಜೆಪಿಯು ರೂಪಿಸಿದೆ ಎಂದು ಬಿಜೆಪಿ ಕೆಆರ್ ಕ್ಷೇತ್ರದ ಅಧ್ಯಕ್ಷ ಗೋಪಾಲರಾಜ್ ಅರಸ್ ಹೇಳಿದರು.

ರಾಮಾನು ರಸ್ತೆ ಯಲ್ಲಿರುವ ಕೆ ಆರ್ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆ ಆರ್ ಕ್ಷೇತ್ರದ ಮಹಿಳಾ ಮೋರ್ಚಾಗೆ ನೇಮಕವಾಗಿ ರುವ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಯೋಜನೆ ಜಾರಿಗೆ ಬಂದರೆ ಅತೀ ಹೆಚ್ಚು ಮಹಿಳಾ ಸಂಸದರು ಆಯ್ಕೆ ಆಗಲಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಇದು ಕೇವಲ ಚುನಾವಣೆ ಅಲ್ಲ, ಇದು ಭವಿಷ್ಯದ ಯುವ ನಾಯಕರನ್ನು ರೂಪಿಸುವ ಚುನಾವಣೆ ಆಗಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರಿಗೆ ಹೆಚ್ಚು ಸ್ಥಾನಮಾನ ಕೊಟ್ಟಿದ್ದು ಬಿಜೆಪಿ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಹಿಳಾ ಸಮೂಹಕ್ಕೆ ಬಲ ತುಂಬಿದ್ದರು ಎಂದು ‌ಗೋಪಾಲರಾಜ ಅರಸ್ ತಿಳಿಸಿದರು.

ಕೆ ಆರ್ ಕ್ಷೇತ್ರದ ಮಹಿಳಾ ಮೋರ್ಚಾದ ವಿವಿಧ ಜವಾಬ್ದಾರಿ ವಹಿಸಿಕೊಂಡ ಅಧ್ಯಕ್ಷರಾದ ಸರ್ವಮಂಗಳ, ಆಶಾ ಲಕ್ಷ್ಮಿ ನಾರಾಯಣ್, ರೂಪ, ಕಾವೇರಿ ನಾಗರಾಜ್, ಮಾಜಿನಗರ ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ರೇಖಾ, ಜ್ಯೋತಿ ರವಿ, ಮೀನಾ, ಮತ್ತು ನಾಗಶ್ರೀ ಸುಚಿಂದ್ರ ರವರನ್ನು ಸನ್ಮಾನಿಸಲಾಯಿತು

ಬಿಜೆಪಿ ಮೈಸೂರ್ ನಗರ ಕಾರ್ಯದರ್ಶಿ ಎಂ ಆರ್ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಜಯರಾಮ್,ನಗರ ಪಾಲಿಕೆ ಮಾಜಿ ಸದಸ್ಯರಾದ ಬಿ. ವಿ ಮಂಜುನಾಥ್, ಸೌಭಾಗ್ಯ ಮೂರ್ತಿ, ವಾರ್ಡ್ ಅಧ್ಯಕ್ಷರಾದ ಮಂಜು, ಚೇತನ್, ವಿಶ್ವ ಮತ್ತಿತರರು ಹಾಜರಿದ್ದರು.


Share this with Friends

Related Post