Fri. Apr 18th, 2025

ಯುಗಾದಿ ಹಬ್ಬಕ್ಕಾಗಿ ರಂಗೋಲಿ ಸ್ಪರ್ಧೆ

Share this with Friends

ಮೈಸೂರು,ಏ.5: ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ ಆಯೋಜಿಸಲಾಗಿದೆ.

ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಈ ವಿಷಯ ತಿಳಿಸಿದ್ದು,ಇದು ಮೈಸೂರು ನಗರ‌ವ್ಯಾಪ್ತಿಗೆ ಸೀಮಿತವಾಗಿದೆ.

ಮೊದಲ 5 ಸ್ಥಾನ ಪಡೆದ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು, ಹಾಗೂ ಸ್ಪರ್ಧಿಸಿದ ಎಲ್ಲರಿಗೂ ನೆನಪಿನ ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಯುಗಾದಿ ಹಬ್ಬದಂದು ಮಹಿಳೆಯರು ತಮ್ಮ ಮನೆಗಳ ಮುಂದೆ ಆಕರ್ಷಕ ರಂಗೋಲಿಯನ್ನು ಬಿಡಿಸಿ 9880752727 ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ರಂಗೋಲಿ ಚಿತ್ರವನ್ನು ಕಳುಹಿಸಬೇಕು, ಸ್ಪರ್ಧೆಯಲ್ಲಿ ಭಾಗವಹಿಸುವರು ಹೆಸರು ಮತ್ತು ವಿಳಾಸ ದಾಖಲಿಸಬೇಕು ಎಂದು ವಿಕ್ರಮ ಅಯ್ಯಂಗಾರ್ ಕೋರಿದ್ದಾರೆ.


Share this with Friends

Related Post