Mon. Dec 23rd, 2024

ಸಾಲದ ಭಯದಿಂದ ರೈತ ಆತ್ಮಹತ್ಯೆ

Share this with Friends

ಮೈಸೂರು,ಏ.6: ಸಾಲದ ಭಯದಿಂದ ರೈತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು
ಚುಂಚ್ಚನಹಳ್ಳಿ ಗ್ರಾಮದ ನಾಗಭೂಷಣ್ (61) ಆತ್ಮಹತ್ಯೆ ಮಾಡಿಕೊಂಡ ರೈತ.

ಒಂದೂವರೆ ಎಕರೆ ಜಾಗದಲ್ಲಿ ನಾಗಭೂಷಣ್ ಬಾಳೆ ಬೆಳೆ ಹಾಕಿದ್ದರು, ಬರಗಾಲ ಹಿನ್ನಲೆ 200 ಅಡಿ ಬೋರ್ ತೆಗೆದರೂ ನೀರು ಬಂದಿರಲಿಲ್ಲ, ಇದರಿಂದ ಬೇಸರಗೊಂಡಿದ್ದರು.

ಬೇಸರದಲ್ಲೇ ಬಾಳೆ ಬೆಳೆಗೆ ತಂದಿದ್ದ ಕೀಟನಾಶಕ ನಾಗಭೂಷಣ್ ಸೇವಿಸಿದ್ದರು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಎಂಟು ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಾಗಭೂಷಣ್ ಚಿಕಿತ್ಸೆ ಪಡೆಯುತ್ತಿದ್ದರು‌ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ


Share this with Friends

Related Post