Mon. Dec 23rd, 2024

ಲಾರಿ ಉರುಳಿ‌ ಚಾಲಕ, ಕ್ಲೀನರ್, 40 ಜಾನುವಾರುಗಳ ದಾರುಣ ಸಾವು

Share this with Friends

ಆಂಧ್ರಪ್ರದೇಶ,ಫೆ.7: ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಉರುಳಿ ಚಾಲಕ, ಕ್ಲೀನರ್ ಹಾಗೂ 40 ಜಾನುವಾರುಗಳು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ನಡೆದಿದೆ.

ಇಂದು ಮುಂಜಾನೆ ಜಾನುವಾರುಗಳ ಹೊತ್ತೊಯ್ಯುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.

ಲಾರಿ ಚಾಲಕ, ಕ್ಲೀನರ್ ಹಾಗೂ ಲಾರಿಯಲ್ಲಿದ್ದ 40 ಜಾನುವಾರುಗಳು ಸ್ಧಳದಲೇ ಸಾವನ್ನಪ್ಪಿವೆ.

ಜಾನುವಾರಗಳ ಮೃತದೇಹ ಲಾರಿಯ ಕೆಳಗೆ ಸಿಲುಕಿದ್ದವು,ಅವುಗಳ ದೇಹವನ್ನು ಕ್ರೇನ್ ಬಳಸಿ ಸ್ಥಳೀಯರೊಂದಿಗೆ ಸೇರಿ ಪೊಲೀಸರು ಹೊರತೆಗೆದರು.

ಲಾರಿ ಚಾಲಕ ಹಾಗೂ ಕ್ಲೀನರ್ ಗುರುತು ಇನ್ನೂ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Share this with Friends

Related Post