Thu. Dec 26th, 2024

ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಿ:ಕೆ.ಎಂ.ಗಾಯಿತ್ರಿ

Share this with Friends

ಮೈಸೂರು ಏ.6: ಮತದಾನ ಮಾಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕೆಂದು ಜಿ.ಪಂ ಸಿಇಒ ಕೆ.ಎಂ. ಗಾಯಿತ್ರಿ ಕರೆ ನೀಡಿದರು.

ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಭಾರತೀಯ ಆಹಾರ ಸಂಶೋಧನಾ ಕೇಂದ್ರ ಆವರಣದಲ್ಲಿ (ಸಿಎಫ್‌ಟಿಆರ್‌ಐ) ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಡ್ಡಾಯ ಮತದಾನದ ಬಗ್ಗೆ ಪ್ರಮಾಣ ವಚನ ಬೋಧಿಸಿದ ಅವರು ನಗರ ಪ್ರದೇಶದ ಜನರು ಹೆಚ್ಚಾಗಿ ಮತದಾನ ಮಾಡುವುದಿಲ್ಲ ಎಂಬ ಆರೋಪಗಳನ್ನು ದೂರ ಮಾಡಲು ನಗರ ಪ್ರದೇಶದ ವಿದ್ಯಾವಂತ ಮತದಾರರು ಮತದಾನ ಮಾಡಬೇಕು ಎಂದು ಹೇಳಿದರು.

ಎಫ್ ಟಿ ಆರ್ ನಿರ್ದೇಶಕಿ ಅನ್ನಪೂರ್ಣ ಅವರು ಮಾತನಾಡಿ,ಮತದಾನ ಕೇಂದ್ರ ದೂರವಿದೆ ಎಂದು ಮತದಾನ ಮಾಡದೆ ಮತ ವಂಚನೆ ಮಾಡಿಕೊಳ್ಳಬೇಡಿ. ಗ್ರಾಮೀಣ ಪ್ರದೇಶಗಳಿಗಿಂತ ಈ ಬಾರಿ ನಗರ ಪ್ರದೇಶದ ಜನರು ಹೆಚ್ಚು ಮತದಾನ ಮಾಡಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ರಾಮ್ ಪ್ರಸಾದ್, ಸ್ವೀಪ್ ಸಹಾಯಕ ನೋಡಲ್ ಅಧಿಕಾರಿ ಶಾಂತಾ, ಮಹಾನಗರ ಪಾಲಿಕೆ ಅಧಿಕಾರಿಗಳು ,ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post