Thu. Dec 26th, 2024

ಎಚ್ ವಿ ರಾಜೀವ್ ನಿವಾಸಕ್ಕೆ ಶೃಂಗೇರಿ ಶ್ರೀಗಳು ಭೇಟಿ

Share this with Friends

ಮೈಸೂರು,ಏ.6: ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿರುವ ಶೃಂಗೇರಿ ಶ್ರೀಗಳು ಮುಡ ಮಾಜಿ ಅಧ್ಯಕ್ಷ ಎಚ್. ವಿ ರಾಜೀವ್ ನಿವಾಸಕ್ಕೂ ಭೇಟಿ ನೀಡಿದರು.

ಮೈಸೂರು ಅಭಿನವ ಶಂಕರಾಲಯದ ಶತಮಾನೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಶೃಂಗೇರಿಯ ಅನಂತ ಶ್ರೀವಿಭೂಷಿತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಎಚ್. ವಿ ರಾಜೀವ್ ಅವರ ವಿದ್ಯಾರಣ್ಯಪುರಂ ನಿವಾಸಕ್ಕೆ ಶ್ರೀಗಳು ಭೇಟಿ ನೀಡಿದ್ದರು.

ಹೆಚ್ ವಿ ರಾಜೀವ್ ಕುಟುಂಬ ಸದಸ್ಯರು
ಪೂರ್ಣಕುಂಭ ಸ್ವಾಗತ ನೀಡಿ, ಅಪಾರ ಗೌರವಗಳಿಂದ ಪರಮ‌ ಪೂಜ್ಯರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಹೆಚ್. ವಿ ರಾಜೀವ್ ಕುಟುಂಬ ಶ್ರೀಗಳ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದುಕೊಂಡರು.

ಕುಟುಂಬದ ಸದಸ್ಯರು ಹಾಗೂ ಹೊಯ್ಸಳ ಕರ್ನಾಟಕದಲ್ಲಿ ನಿರ್ದೇಶಕರಾದ ಎಸ್ ರಂಗನಾಥ್, ಸತ್ಯ ಪ್ರಕಾಶ್, ಪ್ರೊ ಸುಂದರೇಶ್, ವಿಶ್ವನಾಥ್ ಜಯರಾಮ್ ಭಟ್, ಯು. ಎಸ್ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಪೂಜ್ಯರು, ಸ್ವಾಮೀಜಿಗಳನ್ನು ಮನೆಗೆ ಆಹ್ವಾನಿಸುವುದು ಸೌಭಾಗ್ಯ, ಇಂದು ನಮ್ಮ ನಿವಾಸಕ್ಕೆ ಭೇಟಿ ನೀಡಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಧನ್ಯನಾದೆ ಎಂದು ರಾಜೀವ್ ತಿಳಿಸಿದರು.


Share this with Friends

Related Post