ಮೈಸೂರು, ಏ.6: ಮೈಸೂರಿನ ಶಾರದಾದೇವಿ ನಗರದಲ್ಲಿ ಚಾಮುಂಡೇಶ್ವರಿ ನಗರ ಮಂಡಲದಿಂದ ಬಿಜೆಪಿ ಸ್ಥಾಪನಾ ದಿನವನ್ನು ಆಚರಿಸಲಾಯಿತು.
ಭಾರತ ಮಾತೆ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಲಾಯಿತು.
ಈ ವೇಳೆ ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು ಅವರು ಬಿಜೆಪಿ ಸ್ಥಾಪನೆ, ಅದಕ್ಕಾಗಿ ಬಲಿದಾನ ಮಾಡಿರುವ ದೀನ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಗ್ಗೆ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಸ್ಥಾಪನೆ ಕಾರಣಗಳನ್ನು ನೆನೆದು ಅದರಲ್ಲಿ 370 ವಿಧಿ, ಅಯೋಧ್ಯ ರಾಮ ಮಂದಿರ ಸೇರಿ ಕೆಲವು ಇತ್ಯರ್ಥವಾಗಿದೆ, ಇನ್ನು ಕೆಲವನ್ನು ಸಾಧಿಸಬೇಕಿದೆ ಎಂದು ಹೇಳಿದರು.
ದೀನ್ ದಯಾಳ್ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರಂತ ಅಪ್ರತಿಮ ಸಾಧಕರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರೆದು ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರವರೆಗೆ ದೇಶ ಹಾಗೂ ಜನರ ಕಲ್ಯಾಣದ ಬಗ್ಗೆ ಚಿಂತಿಸುತ್ತ, ಕೆಲಸ ಮಾಡುತ್ತಿರುವ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿ, ಇದರ ಹಿಂದೆ ಕೋಟ್ಯಂತರ ಕಾರ್ಯಕರ್ತರ ಬದ್ಧತೆ ಹಾಗೂ ಶ್ರಮವಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಆರ್ ಸೋಮಶೇಖರ್, ಉಪಾಧ್ಯಕ್ಷರಾದ ಹೆಚ್.ಜಿ. ರಾಜಮಣಿ, ಬಿ.ಸಿ. ಶಶಿಕಾಂತ್, ಶಿವಕುಮಾರ್, ವಿಜಯಕುಮಾರ್, ಹಿರಿಯಣ್ಣ, ಲಲಿತಾ, ಮಂಡಲದ ಕಾರ್ಯದರ್ಶಿಗಳಾದ ವಿನುತಾ, ರಾಕೇಶ್ ನಾಯ್ಡು, ಕಲಾವತಿ, ಶಾರದಾದೇವಿನಗರದ ವಾರ್ಡ್ ಅಧ್ಯಕ್ಷ ರವಿ ನಾಯಕಂಡ, ಮುಖಂಡರಾದ ರಮಾಬಾಯಿ, ಮಂಜುಳಾ ನಾಯಕ್, ಹೇಮಲತಾ, ಅನಿತಾ, ಸುಮಾ, ಸುಮಿತ್ರಾ, ಆಂಡಾಲ್ ಭಗವಾನ್ ಭಾಗವಹಿಸಿದ್ದರು.