Tue. Dec 24th, 2024

ಕುಕ್ಕರಹಳ್ಳಿ ಕೆರೆ ವಾಯುವಿಹಾರಿಗಳ ಬಳಿ ಮತಯಾಚಿಸಿದ ಎಂ.ಲಕ್ಷ್ಮಣ್

Share this with Friends

ಮೈಸೂರು, ಏ.7: ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ ವಾಯುವಿಹಾರಿಗಳ ಬಳಿ ಮತಯಾಚನೆ ಮಾಡಿದರು.

ಬೆಳ್ಳಂಬೆಳಿಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ವಾಯುವಿಹಾರಿಗಳನ್ನ ಭೇಟಿ ಮಾಡಿದ ಎಂ.ಲಕ್ಷ್ಮಣ್ ಅವರು ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಕುಕ್ಕರಹಳ್ಳಿ ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಕ ಯುವತಿಯರು ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಎಂ ಲಕ್ಷ್ಮಣ್ ರವರಿಗೆ ಬೆಂಬಲ ಸೂಚಿಸಿದರು.

ನಂತರ ಕುಕ್ಕರಹಳ್ಳಿ ಕೆರೆ ಜೋಡಿ ರಸ್ತೆ ಬದಿಯಲ್ಲಿರುವ ಹೋಟೆಲ್ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಮತ ಯಾಚನೆ ಮಾಡಿದರು.

ಎಂ.ಲಕ್ಷ್ಮಣ್ ಅವರು ರಸ್ತೆ ಬದಿಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನಿಂತು ತಿಂಡಿ ಮಾಡಿದರು ಈ ವೇಳೆ ಅಭಿಮಾನಿಗಳು ಫೋಟೊ ಕ್ಲಿಕ್ಕಿಸಿಕೊಂಡರು.

ಲಕ್ಷ್ಮಣ್ ಅವರಿಗೆ ಪ್ರಧಾನ ಕಾರ್ಯದರ್ಶಿ ಎಲ್. ಭಾಸ್ಕರ್ ಗೌಡ ,ಆರ್.ಗಿರೀಶ್, ಮಾಜಿ ಮೇಯರ್ ಬಿ.ಕೆ ಪ್ರಕಾಶ್,ಪುರುಷೋತ್ತಮ್, ಬೀರಿ ಹುಂಡಿ ಬಸವಣ್ಣ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಿ.ಎಂ ರಾಮ್, ಮತ್ತಿತರರು ಕಾಂಗ್ರೆಸ್ ಕಾರ್ಯ ಕರ್ತರು ಮತ್ತು ಮುಖಂಡರು ಸಾಥ್ ನೀಡಿದರು.


Share this with Friends

Related Post