ಮೈಸೂರು, ಏ.7: ಯುಗಾದಿ ಹಬ್ಬದ ಪ್ರಯುಕ್ತ ಶಾಸಕ ಹರೀಶ್ ಗೌಡ ಅವರು
ವಿಪ್ರ ಕುಟುಂಬದವರಿಗೆ ಒಂಟಿಕೊಪ್ಪಲ್ ಪಂಚಾಂಗ ವಿತರಿಸಿ ಶುಭ ಹಾರೈಸಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ
ಮೈಸೂರು ಯುವ ಬಳಗದ ವತಿಯಿಂದ ಹಿಂದೂ ಸಂಪ್ರದಾಯದ ಪಾಲ್ಗುಣ ಮಾಸದ ನೂತನ ವರ್ಷಾಚರಣೆಯಾದ ಯುಗಾದಿ ಹಬ್ಬದ ಪ್ರಯುಕ್ತ ವಿಪ್ರ ಕುಟುಂಬದವರಿಗೆ ಹಮ್ಮಿಕೊಂಡಿದ್ದ ಒಂಟಿಕೊಪ್ಪಲ್ ಪಂಚಾಂಗ ವಿತರಣೆ ಕಾರ್ಯಕ್ರಮದಲ್ಲಿ ಹರೀಶ್ ಗೌಡ ಶುಭ ಕೋರಿದರು.
ಬಳಿಕ ಮಾತನಾಡಿದ ಹರೀಶ್ ಗೌಡ ಅವರು,
ಸೌರಮಂಡಲದ ಆಧಾರಿತದ ಮೇಲೆ ಭೂಮಿಯಲ್ಲಿ ನಡೆಯುವ ಬದಲಾವಣೆಯನ್ನು ತಿಳಿಸುವುದೇ ಪಂಚಾಂಗ ಎಂದು ತಿಳಿಸಿದರು.
ಯುಗಾದಿ ವರ್ಷಾಚರಣೆ ಬೇವು ಬೆಲ್ಲ ಕಹಿಸಿಹಿಯ ಸಂಕೇತ, ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.
ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಮಾತನಾಡಿ ಒಂಟಿಕೊಪ್ಪಲ್ ಪಂಚಾಂಗ ದೇಶ,ವಿದೇಶಗಳಲ್ಲಿ ಜನಪ್ರಿಯವಾಗಿದ್ದು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದೆ, ಧಾರ್ಮಿಕ ಸಂಪ್ರಾದಯವನ್ನು ಪರಿಪಾಲಿಸುವವರು ಪಂಚಾಂಗದ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೋರಿದರು.
ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮೈ ಕಾ ಕುಮಾರ್, ಮೈಸೂರು ಯುವ ಬಳಗದ ಸಂಚಾಲಕರಾದ ನವೀನ್, ರವಿಚಂದ್ರ, ನಂಜುಂಡಸ್ವಾಮಿ, ಹೇಮಂತ್, ವಿಜ್ಞೇಶ್ವರ ಭಟ್, ಸುದರ್ಶನ್, ಲೋಕೇಶ್, ಮಂಜುಳಾ, ಶಾಂತ ,ಮಂಗಳ, ರಂಗನಾಥ್, ಪ್ರಶಾಂತ್, ಶ್ರೀಕಾಂತ್ ಕಶ್ಯಪ್, ಮಹೇಶ್ ಕುಮಾರ್, ಪ್ರೊಫೆಸರ್ ಶರ್ಮಾ, ಚಕ್ರಪಾಣಿ, ಶ್ರೀನಿವಾಸ್, ಮಿರ್ಲೆ ಪನಿಶ್, ಮತ್ತಿತರ ವಿಪ್ರ ಮುಖಂಡರು ಭಾಗವಹಿಸಿದ್ದರು.