ಹಾಸನ,ಏ.7: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಖಾಸಗಿ ಡಿಸ್ಟಿಲರೀಸ್ ನಲ್ಲಿ ತಪಾಸಣೆ ಮಾಡಿ ಕೋಟ್ಯಂತರ ಮೌಲ್ಯದ ಬಿಯರ್ ವಶಪಡಿಸಿಕೊಂಡಿದೆ.
ಮೆ|| ವುಡ್‌ಪೆಕರ್ ಡಿಸ್ಟಿಲರಿಸ್ ಅಂಡ್ ಬ್ರಿವರೀಸ್ ಪ್ರೈ ಲಿ.ನಲ್ಲಿ (ಬ್ರಿವರಿ ವಿಭಾಗ) ತಪಾಸಣೆ ನಡೆಸಿ, ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ 9,54,08,422 ಬೆಲೆಯ ಬಿಯರ್‌ಗಳನ್ನು ಜಪ್ತಿ ಮಾಡಿದೆ.
ಈ ಡಿಸ್ಟಿಲರಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16 ರಿಂದ ಏ. 6 ರವರೆಗೆ ಹಾಸನ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಅಕ್ರಮ ಮದ್ಯ ಚಟುವಟಿಕೆಗಳನ್ನು ಪತ್ತೆಹಚ್ಚಿ ಒಟ್ಟು 970 ಆರೋಪಿಗಳನ್ನು ಬಂಧಿಸಲಾಗಿದೆ.
ಅಬಕಾರಿ ಕಾನೂನಿನನ್ವಯ ಒಟ್ಟು 944 ಪ್ರಕರಣ ದಾಖಲಿಸಿ 51 ವಿವಿಧ ರೀತಿಯ ವಾಹನಗಳನ್ನು ಜಪ್ತಿ ಮಾಡಿ ಒಟ್ಟು ಅಂದಾಜು 10,48,76,148 ರೂ ಮೌಲ್ಯದ
ಬಿಯರ್,ವೈನ್,ಸೇಂದಿ ಮತ್ತಿತರ ಡ್ರಿಂಕ್ಸ್ ವಶಪಡಿಸಿಕೊಳ್ಳಲಾಗಿದೆ.