Mon. Dec 23rd, 2024

ಬೇವು ಬೆಲ್ಲ ವಿತರಿಸಿ ಎಂ ಲಕ್ಷ್ಮಣ್ ಪರ ಮತಯಾಚನೆ

Share this with Friends

ಮೈಸೂರು,ಏ.8: ಬೇವು ಬೆಲ್ಲ ವಿತರಿಸಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕರಪತ್ರ ಕೊಟ್ಟು ಮೈಸೂರು – ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಪರ ಮತಯಾಚನೆ ಮಾಡಲಾಯಿತು.

ಮೈಸೂರಿನ ಗಿರಿ ದರ್ಶಿನಿ ಲೇಔಟ್ ನಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಅವರು ಮನೆ,ಮನೆಗೆ ತೆರಳಿ ಬೇವು ಬೆಲ್ಲ ನೀಡಿ ಯುಗಾದಿ ಹಬ್ಬದ ಶುಭ ಕೋರಿ ನಂತರ ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ಕೊಟ್ಟು ಎಂ. ಲಕ್ಷ್ಮಣ್ ಪರ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ನಜರ್ಬಾದ್ ನಟರಾಜ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರೆಂಟಿ ಗಳು ಮತದಾರರಲ್ಲಿ ಉತ್ಸಾಹ ಮೂಡಿಸಿವೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರ ಪ್ರಧಾನ ಕಾರ್ಯದರ್ಶಿ ಬಸವರಾಜ್ ನಾಯಕ್, ಮುಖಂಡರುಗಳಾದ ಕೃಷ್ಣಪ್ಪ, ಲೋಕೇಶ್ , ವರುಣ ಮಹದೇವ್, ಬಿ.ಎಸ್.ಎನ್.ಎಲ್ ಮಾದೇವಯ್ಯ, ಶಿಲ್ಪಾ ರಾಣಿ, ನಿಶಾ, ಜಾನ್ಹವಿ, ಕೆಂಪಮ್ಮ, ಗೌರಿ, ಮತ್ತಿತರರು ಪ್ರಚಾರ ಕಾರ್ಯದಲ್ಲಿ ಸಾಥ್ ನೀಡಿದರು.


Share this with Friends

Related Post