Mon. Dec 23rd, 2024

ಸ್ವಾಮೀಜಿ ಬಗ್ಗೆ ಮಾತನಾಡಲು ಡಿಕೆಶಿಗೆ ನೈತಿಕತೆ ಇಲ್ಲ: ಅಶೋಕ್ ಕಿಡಿ

Share this with Friends

ಬೆಂಗಳೂರು,ಏ.10: ಬಿಜೆಪಿ, ಜೆಡಿಎಸ್ ನಾಯಕರು ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್ ವಿರುದ್ಧ ಅಶೋಕ್ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅಶೋಕ್, ಡಿಕೆಶಿಗೆ ಸೋಲಿನ ಭೀತಿ ಕಾಡುತ್ತಿದೆ, ನಿನ್ನೆ ತಮಿಳುನಾಡು ದೇವಸ್ಥಾನಕ್ಕೆ ಹೋಗಿದ್ದರು, ಇವತ್ತು ಇಲ್ಲಿಗೆ ನಾವು ಬಂದಿದ್ದು ನೋಡಿ ಅವರಿಗೆ ಚಳಿ ಜ್ವರ ಬಂದಿದೆ ಎಂದು ವ್ಯಂಗ್ಯವಾಡಿದರು.

ಶ್ರೀಗಳ ಬಗ್ಗೆ ಮಾತನಾಡುವುದಕ್ಕೆ ಡಿಕೆಶಿಗೆ ನೈತಿಕತೆ ಇಲ್ಲ, ಸ್ವಾಮೀಜಿ ಬಗ್ಗೆ ಡಿಕೆಶಿ ಅಗೌರವವಾಗಿ ಮಾತಾಡಿದ್ದಾರೆ, ಸ್ವಾಮೀಜಿ ಬಗ್ಗೆ ಎಚ್ಚರಿಕೆಯಿಂದ ಮಾತಾಡಲಿ ಎಂದು ಹೇಳಿದರು.

ಡಿಕೆಶಿಗೆ ಕಷ್ಟ ಬಂದಾಗ, ಜೈಲಿಗೆ ಹೋಗಿ ಬಂದಾಗ ಸ್ವಾಮೀಜಿ ಸಂತೈಸಿದ್ದರು, ಇದನ್ನ ಡಿಕೆಶಿ ಮರೆತಿದ್ದಾರಾ, ಮಠವನ್ನ ರಾಜಕೀಯಕ್ಕೆ ಎಳೆದು ತಂದಿದ್ದು ಸರಿಯಲ್ಲ ಎಂದು ಅಶೋಕ್ ಕಿಡಿಕಾರಿದರು.

ಹೆಚ್‍ ಡಿ ಕೆ ಸರ್ಕಾರ ಬೀಳಿಸಿದ್ದ ಸಂದರ್ಭದಲ್ಲಿ ಹೆಚ್ಚಾಗಿ ಬಂದವರು ಕಾಂಗ್ರೆಸ್‍ನವರೇ, ಸಿದ್ದರಾಮಯ್ಯ ಅವರನ್ನಡೆ ಕೇಳಲಿ, ಯಾರು ಸರ್ಕಾರ ಬೀಳಿಸಿದ್ದು ಅಂತ ಎಂದು ಹೇಳಿದರು.


Share this with Friends

Related Post