Mon. Dec 23rd, 2024

ಮನಮೋಹನ್‌ ಸಿಂಗ್‌ ಕಾರ್ಯಗಳನ್ನು ಶ್ಲಾಘಿಸಿದ ಮೋದಿ

Share this with Friends

ನವದೆಹಲಿ,ಫೆ.8: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ನಿವೃತ್ತರಾಗಲಿರುವ ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅವರಿಗಿರುವ ಬದ್ಧತೆ ಅಪಾರ‌ ಎಂದು ಕೊಂಡಾಡಿದರು.

ನಾನು ಮನಮೋಹನ್‌ ಸಿಂಗ್‌ ಅವರನ ಕೊಡುಗೆ ಅಪಾರವಾಗಿದೆ, ಅವರು ಇಷ್ಟು ದಿನ ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಸದನದಲ್ಲಿ ಮತದಾನದ ವೇಳೆ ಆಡಳಿತ ಪಕ್ಷವೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ಡಾ.ಮನಮೋಹನ್ ಸಿಂಗ್ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ಕೂಡ ನನಗೆ ನೆನಪಿದೆ.

ಅವರು ಯಾರಿಗೆ ಅಧಿಕಾರ ಕೊಡಲು ಬಂದಿದ್ದರು ಎಂಬುದು ಪ್ರಶ್ನೆಯಲ್ಲ,ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲು ಬಂದಿದ್ದರು ಎಂದು ನಾನು ನಂಬುತ್ತೇನೆ ಎಂದು ಹೇಳಿದರು.

ಸದಸ್ಯರು ತಮ್ಮ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ಮನಮೋಹನ್ ಸಿಂಗ್ ಎಲ್ಲ ಸಂಸದರಿಗೆ ಸ್ಫೂರ್ತಿ ಎಂದು ಪ್ರಧಾನಿಗಳು ಬಣ್ಣಿಸಿದರು.


Share this with Friends

Related Post