Fri. Nov 1st, 2024

ಕೆನಡಾ ಚುನಾವಣೆಯಲ್ಲಿ ಭಾರತ ಮೂಗು ತೂರಿಸಿಲ್ಲ : ತನಿಖೆಯಿಂದ ದೃಢ

Share this with Friends

ನವದೆಹಲಿ,ಏ.10- ಕೆನಡಾ ಚುನಾವಣೆ ಯಲ್ಲಿ ಭಾರತದ ಹಸ್ತಕ್ಷೇಪವಿಲ್ಲ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ. ಕೆನಡಾ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಆರೋಪದ ಬಗ್ಗೆ ಅಧಿಕೃತ ತನಿಖೆಯು ಕೆನಡಾದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಭಾರತ ಪ್ರಯತ್ನಿಸ ಲಿಲ್ಲ ಎಂದು ತೀರ್ಮಾನಿಸಿದೆ.

ದೇಶದಲ್ಲಿ 2021 ರ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಕೆನಡಾದ ಹಿರಿಯ ಅಧಿಕಾರಿಗಳ ಸಮಿತಿಯು ರಾಷ್ಟ್ರೀಯ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಭಾರತವು ಯಾವುದೇ ಪ್ರಯತ್ನ ನಡೆಸಿಲ್ಲ ಎನ್ನುವುದನ್ನು ಬಹಿರಂಗಗೊಳಿಸಿದೆ.

2021 ರ ಚುನಾವಣೆಯ ಸಮಯದಲ್ಲಿ ಭಾರತ ಸರ್ಕಾರವು ಆ ಪರಿಕರಗಳನ್ನು ಪ್ರಚಾರದಲ್ಲಿ ಬಳಸಿದ ಪುರಾವೆಗಳನ್ನು ನಾವು ನೋಡಿದ್ದೇವೆ ಎಂದು ನಾನು ನಂಬುವುದಿಲ್ಲ ಎಂದು ಚುನಾವಣಾಕಾರಿ ಯೊಬ್ಬರು ತನಿಖಾ ಸಮಿತಿಗೆ ತಿಳಿಸಿದರು.ಆದಾಗ್ಯೂ, ಅಕೃತ ತನಿಖೆಯಲ್ಲಿ ಸಾಕ್ಷ್ಯದ ಪ್ರಕಾರ, ಕೆನಡಾದ ಕೊನೆಯ ಎರಡು ಚುನಾವಣೆಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಿದೆ ಎಂದು ಕೆನಡಾದ ಗುಪ್ತಚರ ಸಂಸ್ಥೆ ಕಂಡುಹಿಡಿದಿದೆ.

2019 ಮತ್ತು 2021 ರಲ್ಲಿ ನಡೆದ ಕೆನಡಾ ಚುನಾವಣೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯಪ್ರವೇಶಿಸಲು ಪ್ರಯತ್ನಿಸಿದೆ ಎಂದು ಕೆನಡಾ ಭದ್ರತಾ ಗುಪ್ತಚರ ಸೇವೆ ಆರೋಪಿಸಿದ ಕೆಲವು ದಿನಗಳ ನಂತರ ಈ ವರದಿ ಬಂದಿದೆ.

ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷವು 2019 ಮತ್ತು 2021 ರಲ್ಲಿ ನಡೆದ ಎರಡೂ ಚುನಾವಣೆಗಳಲ್ಲಿ ಜಯಗಳಿಸಿತು. ಚೀನಾದ ಸಂಭಾವ್ಯ ಪಾತ್ರದ ಕುರಿತು ಮಾಧ್ಯಮ ವರದಿಗಳ ಬಗ್ಗೆ ಅಸಮಾಧಾನಗೊಂಡ ವಿರೋಧ ಪಕ್ಷದ ಶಾಸಕರ ಒತ್ತಡದ ಅಡಿಯಲ್ಲಿ, ಟ್ರುಡೊ ವಿದೇಶಿ ಹಸ್ತಕ್ಷೇಪಕ್ಕೆ ಆಯೋಗವನ್ನು ಸ್ಥಾಪಿಸಿದ್ದರು. ಟ್ರೂಡೊ ಅವರು ಇಂದು ತನಿಖಾ ಸಮಿತಿಯ ಮುಂದೆ ಸಾಕ್ಷ್ಯ ನುಡಿಯಲಿದ್ದಾರೆ.

ಭಾರತವು ಈ ಹಿಂದೆ ಆರೋಪಗಳನ್ನು ನಿರಾಕರಿಸಿತ್ತು ಮತ್ತು ಇತರ ರಾಷ್ಟ್ರಗಳ ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡದಿರುವ ತನ್ನ ಬದ್ಧತೆಯನ್ನು ಭರವಸೆ ನೀಡಿತ್ತು.ಕೆನಡಾದ ಆಯೋಗವು ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ನಾವು ನೋಡಿದ್ದೇವೆ … ಕೆನಡಾದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪದ ಎಲ್ಲಾ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣೀರ್ ಜೈಸ್ವಾಲ್ ಫೆಬ್ರವರಿಯಲ್ಲಿ ಹೇಳಿದ್ದರು.ವಿದೇಶಿ ಮಧ್ಯಪ್ರವೇಶದ ಬಗ್ಗೆ ಕೆನಡಾದ ವಿಚಾರಣೆಯು ಈಗಾಗಲೇ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಕೆನಡಾದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಟ್ರೂಡೊ ಅವರ ಹಿಂದಿನ ಆರೋಪಗಳು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಿರುಕು ಸೃಷ್ಟಿಸಿದ್ದವರು.


Share this with Friends

Related Post