Mon. Dec 23rd, 2024

ಪತ್ನಿಯ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

Share this with Friends

ಕೊಪ್ಪಳ,ಏ.10: ಪತ್ನಿಯನ್ನು ಕೊಂದು ನಂತರ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಬುಡಶೆಡ್ನಾಳ್ ಗ್ರಾಮದಲ್ಲಿ ನಡೆದಿದೆ.

ಬುಡಶೆಡ್ನಾಳ್ ಗ್ರಾಮದ
ಲಕ್ಷ್ಮವ್ವ ವಾಲೀಕಾರ್ (40) ಕೊಲೆಯಾದ ದುರ್ದೈವಿ.

ಕುಡಿತದ ಚಟ ಅಂಟಿಸಿಕೊಂಡಿದ್ದ ನಿಂಗಪ್ಪ ಬೇಕಾದಷ್ಟು‌ ಕೈ ಸಾಲ ಮಾಡಿದ್ದ,ಹೀಗೆ ಪ್ರತಿದಿನ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ.

ಇದರಿಂದ ರೋಸಿಹೋಗಿದ್ದ ಲಕ್ಷ್ಮವ್ವ ವಾಲೀಕಾರ್ ನಿನ್ನೆ ರಾತ್ರಿ ಗಂಡನನ್ನು ಪ್ರಶ್ನಿಸಿದ್ದಾಳೆ.ಜಗಳ ತರಕಕ್ಕೆ ಹೋಗಿದೆ,ಆಗ ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ನಿಂಗಪ್ಪ ಕೊಲೆ ಮಾಡಿದ್ದಾನೆ.

ಪತ್ನಿ ಸತ್ತಿದ್ದು ನೋಡಿ ಹೆದರಿದ ನಿಂಗಪ್ಪ ಗ್ರಾಮದ ಹೊರವಲಯಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪಳ ಗ್ರಾಮಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post