Mon. Dec 23rd, 2024

ಬೆಳಗಾವಿಯಲ್ಲಿ ದಾಖಲೆ ಇಲ್ಲದ 16 ಲಕ್ಷ ಹಣ ವಶ

Share this with Friends

ಬೆಳಗಾವಿ,ಏ.11: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮ ಹಣ ಸಾಗಣೆ ಜೋರಾಗಿದ್ದು, ಪ್ರತಿ ದಿನ ಚುನಾವಣಾ ಅಧಿಕಾರಿಗಳು ಹಣ ವಶಪಡಿಸಿಕೊಳ್ಳುತ್ತಲೇ ಇದ್ದಾರೆ.

ಅದರಂತೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16 ಲಕ್ಷ ಹಣವನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ನಡೆದಿದೆ ಸೀಸ್ ಮಾಡಲಾಗಿದೆ.

ನಿನ್ನೆ ತಡರಾತ್ರಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

ಇಚಲಕರಂಜಿ ಮೂಲದ ಸಂತೋಷ್ ಪೂಜಾರಿ ಹಾಗೂ ಜ್ಞಾನೇಶ್ವರ್ ಪಾಟೀಲ್ ಎಂಬುವವರು ಈ ಹಣವನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರಿಬ್ಬರನ್ನು ವಿಚಾರಿಸಿದಾಗ ಹಣದ ಬಗ್ಗೆ ಸಮಂಜಸ ಉತ್ತರ ನೀಡಿಲ್ಲ,ಹಾಗಾಗಿ ಹಣ ಜಪ್ತಿ ಮಾಡಿದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.


Share this with Friends

Related Post