Mon. Dec 23rd, 2024

ರಾಯಬರೇಲಿ, ಅಮೇಥಿಯಿಂದ ನೆಹರು ಕುಟುಂಬದವರೇ ಸ್ಪರ್ಧೆ : ಆಂಟನಿ

A. K. Antony
Share this with Friends

ತಿರುವನಂತಪುರಂ,ಏ.11- ಉತ್ತರ ಪ್ರದೇಶದ ಯಾವುದಾದರೂ ಒಂದು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ ಸುಳಿವು ನೀಡಿದ್ದಾರೆ.

ನೀವು ಅಮೇಥಿ ಮತ್ತು ರಾಯ್ಬರೇಲಿಯ ನಿರ್ಧಾರಕ್ಕಾಗಿ ಕಾಯಿರಿ. ಊಹಾಪೊಹ ಬೇಡ. ನೆಹರು ಕುಟುಂಬದ ಸದಸ್ಯರೊಬ್ಬರು ಉತ್ತರ ಪ್ರದೇಶದಿಂದ ಸ್ರ್ಪಸುತ್ತಾರೆ ಎಂದು ಆಂಟನಿ ನ್ಯೂಸ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಬರ್ಟ್ ವಾದ್ರಾ ಅಭ್ಯರ್ಥಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ, ಅದು ಹಾಗಾಗುವುದಿಲ್ಲ ಎಂದು ಅವರು ಸುಳಿವು ನೀಡಿದರು.ದೇಶದ ಜಾತ್ಯತೀತ ಪಕ್ಷಗಳು ಗಾಂ ಕುಟುಂಬದ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿವೆ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ತಿಳಿಸಿದರು.

ಒಂದು ಕಾಲದಲ್ಲಿ ಗಾಂ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ರಾಯ್ಬರೇಲಿ ಮತ್ತು ಅಮೇಥಿಗೆ ಅಭ್ಯರ್ಥಿಗಳನ್ನು ಘೋಷಿಸುವಲ್ಲಿ ಕಾಂಗ್ರೆಸ್ನ ವಿಳಂಬದ ನಡುವೆ ಅವರ ಹೇಳಿಕೆ ಹೊರಬಿದ್ದಿದೆ.


Share this with Friends

Related Post