Wed. Jan 1st, 2025

ಮತದಾನ ಜಾಗೃತಿಗಾಗಿ ಸೈಕ್ಲೋಥಾನ್ ಗೆ ಚಾಲನೆ

Share this with Friends

ಬೆಂಗಳೂರು, ಏ.11: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿಗಾಗಿ ಬೆಂಗಳೂರಿನಲ್ಲಿ ಸೈಕ್ಲೋಥಾನ್ ಆಯೋಜಿಸಲಾಗಿತ್ತು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ
ಸೈಕ್ಲೋಥಾನ್ ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಚುನಾವಣಾ ರಾಯಭಾರಿ ಅನುಪ್ ಶ್ರೀಧರ್ ಮತ್ತಿತರ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ತುಷಾರ್ಗಿರಿ ನಾಥ್ ಮತದಾನದ ಹಬ್ಬವನ್ನು ನಾವೆಲ್ಲರೂ ಸೇರಿ ಒಟ್ಟಾಗಿ ಆಚರಿಸೋಣ ಎಂದು ಕರೆ ನೀಡಿದರು.

ಮತದಾನ ಸಂವಿಧಾನ ದತ್ತವಾದ ಹಕ್ಕು ಹಾಗಾಗಿ ಲೋಕಸಭಾ ಚುನಾವಣೆಯಂದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳು ಪಾಲಿಸಧಿಕಾರಿಗಳು ಕೂಡ ಸೈಕ್ಲೋಥಾನ್ ಭಾಗವಹಿಸಿದ್ದು ವಿಶೇಷ.


Share this with Friends

Related Post