Sat. Jan 4th, 2025

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಪಶ್ಚಿಮ ಬಂಗಾಳದಲ್ಲಿ ಪ್ರಮುಖ‌ ಅರೆಸ್ಟ್

Share this with Friends

ಬೆಂಗಳೂರು,ಏ.12: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಪರಾರಿಯಾಗಿದ್ದ ಇಬ್ಬರು ಉಗ್ರರನ್ನು ಕಡೆಗೂ ಎನ್‍ಐಎ ಅಧಿಕಾರಿಗಳು‌
ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಕೃತ್ಯ ಎಸಗಿ ಮುಸಾವೀರ್ ಹುಸೇನ್ ಕೋಲ್ಕತ್ತಾದಲ್ಲಿ ಅಡಗಿದ್ದ. ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ ಬಾಂಬರ್ ಮುಸಾವೀರ್ ಹಾಗೂ ಈತನಿಗೆ ಸಂಚು ನಡೆಸಲು ನೆರವು ನೀಡಿದ್ದ ಅಬ್ದುಲ್ ಮತೀನ್ ನನ್ನು ಕೂಡ ಬಂಧಿಸಲಾಗಿದೆ.

ಯಾರಿಗೂ ಗುರುತು ಸಿಗದಂತೆ ತಲೆಮರೆಸಿಕೊಂಡಿದ್ದ ಇವರಿಬ್ಬರು ನಕಲಿ ದಾಖಲೆ ನೀಡಿ ಕೋಲ್ಕತ್ತಾದಲ್ಲಿ ವಾಸ್ತವ್ಯ ಹೂಡಿದ್ದರು. ಖಚಿತ ಮಾಹಿತಿ ಆಧರಿಸಿ ಎನ್‍ಐಎ ತಂಡ ಶುಕ್ರವಾರ ಮುಂಜಾನೆ 2.30 ರ ವೇಳೆಗೆ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


Share this with Friends

Related Post