Sat. Jan 4th, 2025

ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ ಜಪ್ತಿ

Share this with Friends

ರಾಮನಗರ,ಏ.12: ರಾಮನಗರ ಮತ್ತಿತರೆಡೆ ಚುನಾವಣ ಅಧಿಕಾರಿಗಳು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಕೋಟಿ, ಕೋಟಿ ಬೆಲೆ ಬಾಳುವ ಚಿನ್ನ,ವಜ್ರ ಆಭರಣವನ್ನು ಜಪ್ತಿ ಮಾಡಿದ್ದಾರೆ.

ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಚ್ಚಾ ಚಿನ್ನ ಹಾಗೂ ವಜ್ರಗಳನ್ನ ಅಧಿಕಾರಿಗಳು ಸೀಸ್ ಮಾಡಿದ್ದಾರೆ.

ರಾಮನಗರದ ಹೆಜ್ವಾಲ ಚೆಕ್‌ಪೋಸ್ಟ್‌ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ,10 ಕೆಜಿ ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್‌ ಗೋಲ್ಡ್‌ ಅಂಡ್ ಡೈಮಂಡ್‌ ಕಂಪನಿಗೆ ಸೇರಿದ್ದೆನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ.

ಸೂಕ್ತ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಚಿನ್ನಾಭರಣ ಜಪ್ತಿ ಮಾಡಿದ್ದು, ಸೂಕ್ತ ದಾಖಲೆ ತೋರಿಸಿ ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


Share this with Friends

Related Post