Sat. Jan 4th, 2025

ವೈಟ್ ಫೀಲ್ಡ್ ಪೊಲೀಸರಿಂದ ಅಂತರಾಜ್ಯ ಕಳ್ಳರ ಬಂಧನ : 30 ಲಕ್ಷದ 107 ಮೊಬೈಲ್ ವಶ

Share this with Friends

ಬೆಂಗಳೂರು, ಏ.12: ಮೊಬೈಲ್ ಪೋನ್‌ಗಳನ್ನು ಕಳವು ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿದ‌ ವೈಟ್ ಫೀಲ್ಡ್ ಪೊಲೀಸರು 30 ಲಕ್ಷ ಬೆಲೆಬಾಳುವ ವಿವಿಧ ಕಂಪನಿಯ 107 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಏ.4ರಂದು ಬಸ್ಸಿನಲ್ಲಿ ಪ್ರಂದಾಣಿಸುತ್ತಿದ್ದಾಗ‌ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನ ಮಾಡಲಾಗಿತ್ತು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ವೈಟ್ ಪೀಲ್ಡ್ ಪೊಲೀಸರು,ಕ್ಷಿಪ್ರ ಕಾರ್ಯಚರಣೆ ನಡೆಸಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 16 ವ್ಯಕ್ತಿಗಳನ್ನು ವಶಕ್ಕೆ ಪಡೆದರು.

ಆರೋಪಿಗಳನ್ನು ವಿಚಾರಣೆ ನಡೆಸಿ, ಅವರಿಂದ ದೂರು ನೀಡಿದ್ದ ವ್ಯಕ್ತಿಯ ಫೋನ್ ಸೇರಿದಂತೆ ಒಟ್ಟು 05 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಂತರ ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 80 వివిಧ ಕಂಪನಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ.

ಅಲ್ಲದೆ ಈ ಆರೋಪಿಗಳು ಅವಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೊಂದು ಬಾಡಿಗೆ ರೂಮ್‌ನ್ನು ಹೊಂದಿದ್ದು, ಆ ರೂಮ್ ಅನ್ನು ತಪಾಸಣೆ ಮಾಡಿದಾಗ ಅಲ್ಲೂ 24 వివిಧ ಕಂಪನಿಯ ಮೊಬೈಲ್ ಫೋನ್ ಗಳು ಕಂಡುಬಂದಿವೆ.

ಈ ವೇಳೆ ಒಟ್ಟು 107 ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಯಿತು.

ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು ಸಾರ್ವಜನಿಕರ ಅರಿವಿಗೆ ಬಾರದಂತೆ ಪಿಕ್ ಪಾಕೆಟಿಂಗ್/ಕಳ್ಳತನ ಮಾಡಿಕೊಂಡು, ನಂತರ ಕದ್ದ ಮಾಲುಗಳನ್ನು ಒಂದು ಕಡೆ ಶೇಖರಿಸಿ, ಅವುಗಳನ್ನು ಅಂತರ ರಾಜ್ಯ ಬಸ್‌ಗಳ ಮುಖಾಂತರ ಹೊರರಾಜ್ಯಕ್ಕೆ ತೆಗೆದುಕೊಂಡು ಹೋಗಿ, ಮಾರಾಟ ಮಾಡುತ್ತಿದ್ದರೆಂದು ವಿಚಾರಣೆ‌ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಕದ್ದ ಮೊಬೈಲ್ ಫೋನ್ ಗಳನ್ನು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಪರಿಶೀಲಿಸಿದರು.

ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್,ಸಹಾಯಕ ಪೊಲೀಸ್ ಆಯುಕ್ತರಾದ ಕವಿತಾ ಮತ್ತು ಸಿಬ್ಬಂದಿ ನಡೆಸಿದರು.


Share this with Friends

Related Post