Wed. Jan 8th, 2025

ಬಲೂನ್ ಹಾರಿಸಿ ಮತದಾನ ಜಾಗೃತಿ

Share this with Friends

ಮೈಸೂರು, ಏ.14: ಲೋಕಸಭಾ ಚುನಾವಣೆಯ ಪ್ರಯುಕ್ತ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಮತದಾನ ಜಾಗೃತಿ ಮೂಡಿಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಡಾ.ಮಧು ಅವರು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು.

ಏಪ್ರಿಲ್ 26 ರಂದು ಎಲ್ಲರೂ ಮತದಾನ ಮಾಡುವಂತೆ ಆಯುಕ್ತರು ಮನವಿ ಮಾಡಿದರು.

ಮಹಾನಗರ ಪಾಲಿಕೆಯ
ವಲಯ ಆಯುಕ್ತೆ ವಾಣಿ ವಿ.ಆಳ್ವ, ಅಭಿವೃದ್ಧಿ ಅಧಿಕಾರಿ ವೆಂಕಟೇಶ್,ಸಹಾಯಕ ಕಂದಾಯ ಅಧಿಕಾರಿ ಸಿದ್ದರಾಜು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Share this with Friends

Related Post