Mon. Apr 21st, 2025

ಆಯುಶ್ಮಾನ್ ಭಾರತ್ ಯೋಜನೆ:ಪ್ರಧಾನಿಗಳಿಗೆ ಧನ್ಯವಾದ ಸಲ್ಲಿಕೆ

Share this with Friends

ಮೈಸೂರು, ಏ.15: ಆಯುಶ್ಮಾನ್ ಭಾರತ್ ಯೋಜನೆ ಮೂಲಕ 1 ಲಕ್ಷ ಕೋಟಿ ಮೊತ್ತದ ಚಿಕಿತ್ಸೆಯನ್ನು ದೇಶದ ಜನತೆಗೆ ಉಚಿತವಾಗಿ ನೀಡಿರುವುದಕ್ಕಾಗಿ ಪ್ರಧಾನಿಗಳಿಗೆ ಧನ್ಯವಾದ ಅರ್ಪಿಸಲಾಯಿತು.

ಚುನಾವಣಾ ಪ್ರಚಾರಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಮೈಸೂರಿಗೆ ಆಗಮಿಸಿದ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಕೆ.ಎಂ. ನಿಶಾಂತ್ ರವರು ಆಯುಶ್ಮಾನ್ ಭಾರತ್ ಯೋಜನೆ ಮೂಲಕ 1 ಲಕ್ಷ ಕೋಟಿ ಮೊತ್ತದ ಚಿಕಿತ್ಸೆಯನ್ನು ದೇಶದ ನಾಗರೀಕರಿಗೆ ಉಚಿತವಾಗಿ ನೀಡಿರುವುದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಆಯುಶ್ಮಾನ್ ಭಾರತ್ ಯೋಜನೆಗೆ ಅಪಘಾತಕ್ಕೀಡಾದವರಿಗೆ ಉಚಿತ ಚಿಕಿತ್ಸೆ, ಕಿಡ್ನಿ ಡಯಾಲಿಸಿಸ್ ಹಾಗು ಕೆಲವು ಪ್ರಮುಖ ಸೇವೆಗಳನ್ನು ಸೇರಿಸಬೇಕೆಂದು ಮೋದಿಯವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ನಿಶಾಂತ್,
ಭಾರತ ಸರ್ಕಾರದ ಒಂದು ಮಹಾತ್ವಾಕಾಂಕ್ಷಿ ಹಾಗೂ ಸರ್ವರಿಗೂ ಆರೋಗ್ಯ ಭಾಗ್ಯವನ್ನು ಕರುಣಿಸಬೇಕೆಂಬ ನರೇಂದ್ರ ಮೋದಿ ಅವರ ಕನಸು ಆಯುಷ್ಮಾನ್ ಭಾರತ ಯೋಜನೆಯ ಮುಖಾಂತರ ನಮ್ಮ ಭಾರತದ ಜನರಿಗೆ ತಲುಪಿದೆ ಎಂದು ಹೇಳಿದರು.

ಇದುವರೆಗೂ 30ಕೊಟಿ ಫಲಾನುಭವಿಗಳು ಆಯುಷ್ಮಾನ್ ಕಾರ್ಡ್ ನೊಂದಾಯಿಸಿಕೊಂಡಿದ್ದು, ಅದರಲ್ಲಿ ಸುಮಾರು 1 ಲಕ್ಷ ಕೋಟಿ ವೆಚ್ಚದ ಚಿಕಿತ್ಸೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿ ಕೆಲವು ಮನವಿಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.

ಮೂತ್ರಪಿಂಡ ಚಿಕಿತ್ಸೆಗೆ ಒಳಗಾಗಿ ಡಯಾಲಿಸೀಸ್ ಚಿಕಿತ್ಸೆಯನ್ನು ಪಡೆಯುತ್ತಿರುವ ಹೊರರೋಗಿಗಳ ಚಿಕಿತ್ಸೆಗೆ ಆಯುಷ್ಮಾನ್‌ ಭಾರತ್ ಯೋಜನೆ ಲಭ್ಯವಾಗಬೇಕು ಹಾಗೂ ಮೂತ್ರಪಿಂಡ ಕಸಿ ಮಾಡುವುದಕ್ಕೆ ಎಲ್ಲಾ ನೊಂದಾಯಿತ ಆಸ್ಪತ್ರೆಗಳಲ್ಲೂ ಈ ಯೋಜನೆ ಲಭ್ಯವಾಗುವಂತೆ ಮಾಡಬೇಕೆಂದು ವಿನಂತಿಸಿದ್ದೇನೆ ಎಂದು ತಿಳಿಸಿದರು.

ರೆಫರಲ್ ಪತ್ರವನ್ನು ನೀಡುವ ಪ್ರಕ್ರಿಯೆಯನ್ನು ಸಡಿಲಗೊಳಿಸಿ ಎಲ್ಲಾ ನೊಂದಾಯಿತ ಖಾಸಗೀ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್‌ ಯೋಜನೆಯಡಿಯಲ್ಲಿ ಚಿಕಿತ್ಸೆ ದೊರೆಯುವಂತೆ ಅನುಕೂಲ ಕಲ್ಪಸಿಕೊಡಬೇಕೆಂದು ಕೇಳಿದ್ದೇನೆ.

ಹೃದಯ ಸಂಬಂಧಿ ಔಷದೋಪಚಾರದ ಬೆಲೆಯನ್ನು ಇಳಿಸಿರುವಂತೆ ಕ್ಯಾನ್ಸರ್ ಔಷದೋಪಚಾರದ ಬೆಲೆಯನ್ನು ಇಳಿಸಲು ವಿನಂತಿಸಿದ್ದೇನೆ.

ಸಾರ್ವಜನಿಕರಿಗೆ ಆಯುಶ್ಮಾನ್ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಿರುವುದಕ್ಕೆ ಬಿಲ್ ವ್ಯವಸ್ಥೆಯನ್ನು ಪರಿಷ್ಕರಿಸಲು ವಿನಂತಿಸಿದ್ದೇನೆ ಎಂದು ನಿಶಾಂತ್ ತಿಳಿಸಿದರು.


Share this with Friends

Related Post