ಹಾಸನ,ಏ.16: ಕಾಡಾನೆ ಹಿಂಡಿನಿಂದ ಬೇರ್ಪಟ್ಟ ಮದಗಜಗಳು ಆಹಾರ ಅರಸುತ್ತಾ ನಾಡಿಗೆ ಬಂದು ಇದ್ದಕ್ಕಿದ್ದಂತೆ ಮನೆಯೊಂದರ ಮುಂದೆ ಕಾದಾಡಿದ ಪ್ರಸಂಗ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿ, ಹುಲ್ಲೇಮಕ್ಕಿ ಗ್ರಾಮದಲ್ಲಿ, ಕಾಡಾನೆ ಹಿಂಡಿನಿಂದ ಬೇರ್ಪಟ್ಟ ಎರಡು ಕಾಡಾನೆಗಳ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದಾಟ ನಡೆಯಿತು.
ಹುಲ್ಲೇಮಕ್ಕಿ ಗ್ರಾಮದ ಯೂನಸ್ ಅವರ ಮನೆಯ ಮುಂಭಾಗ ಗೇಟಿನ ಸಮೀಪವೇ ಕರಡಿ ಹಾಗೂ ಕ್ಯಾಪ್ಟನ್ ಎಂಬ ಹೆಸರಿನ ಕಾಡಾನೆಗಳು ಕಾದಾಡಿದವು,ಜನರ ಕೂಗಾಟ ಪಟಾಕಿ ಶಬ್ದಕ್ಕೂ ಹೆದರಲಿಲ್ಲ,ಕಾದಾಟ ಮುಂದುವರಿಸಿ ಆತಂಕ ಸೃಷ್ಟಿಸಿದವು.
ಸ್ಥಳೀಯರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ, ಇಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.ಆದರೆ ಎರಡೂ ಆನೆಗಳು ಕಾಡಿನೊಳಗೆ ಹೊರಟುಹೋಗಿದ್ದವು.
ಆನೆಗಳು ಎಲ್ಲಿಂದ ಬಂದವು,ಯಾವ ದಿಕ್ಕಿನಲ್ಲಿ ಸಾಗಿದವು ಎಂಬ ಬಗ್ಗೆ ಸ್ಥಳೀಯರಿಂದ ಮಾಹುತಿ ಪಡೆದು ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದರು.