Sat. Jan 4th, 2025

ಕರಗ ಮಹೋತ್ಸವಕ್ಕೆ ಇಂದು ಅಧಿಕೃತ ಚಾಲನೆ

Share this with Friends

ಬೆಂಗಳೂರು, ಏ.16: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ.

ಇದೇ ಹುಣ್ಣಿಮೆಯ ಶುಭದಿನದಂದು, ಬೆಂಗಳೂರು ಕರಗ ಉತ್ಸವ ನಡೆಯಲಿದೆ ಹಾಗಾಗಿ ಇಂದಿನಿಂದ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿವೆ.

ಕರಗ ಮಹೋತ್ಸವದ ಮೊದಲನೇ ದಿನವಾದ ಇಂದು ಧರ್ಮರಾಯ ದೇವಾಲಯದ ಅರ್ಚಕರು,ವೀರಕುಮಾರರಾದ ಜ್ಞಾನೇಂದ್ರ ಅವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಈ‌ ವೇಳೆ ನೂರಾರು ಮಂದಿ ಭಕ್ತರು ಅಭಿಮಾನಿಗಳು ಹಾಜರಿದ್ದರು, ದ್ರೌಪದಮ್ಮ ದೇವಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದ ಜ್ಞಾನೇಂದ್ರ ಅವರು ಭಕ್ತರಿಗೆ ಮಹಾಮಂಗಳಾರತಿ ನೀಡಿದರು.

ಜ್ಞಾನೇಂದ್ರ ಅವರು ದೇವಾಲಯದಲ್ಲೇ ಇದ್ದುಕೊಂಡು ಕಟ್ಟಾ ಉಪವಾಸ ಇತ್ಯಾದಿ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹುಣ್ಣಿಮೆಯ ದಿನ ಇಡೀ ರಾತ್ರಿ ಹೂವಿನ ಕರಗ ಹೊತ್ತು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾರೆ.

ಈ ಬೆಂಗಳೂರು ಕರಗವನ್ನು ನೋಡಲು ಎರಡು ಕಣ್ಣುಗಳು ಸಾಲದು. ದೇಶ ವಿದೇಶಗಳಿಂದಲೂ ಕರಗ ಉತ್ಸವ ಕಣ್ ತುಂಬಿ ಕೊಳ್ಳಲು ಜನರು ಆಗಮಿಸುವುದು ವಿಶೇಷ.


Share this with Friends

Related Post