ಅಯೋಧ್ಯೆ,ಏ.17: 500 ವರ್ಷಗಳ ಬಳಿಕ ಶ್ರೀರಾಮ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿಯ ಈ ದಿನ ಬಾಲರಾಮನಿಗೆ ಸೂರ್ಯ ಕಿರಣ ಸ್ಪರ್ಶ ವಾಯಿತು.
ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.
ರಾಮ ಮಂದಿರದಲ್ಲಿ ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳ ಮೂಲಕ ಸೂರ್ಯ ಕಿರಣ ರಾಮ ಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು.
ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೆ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು
ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ,ಸಂಭ್ರಮ ಮನೆಮಾಡಿದೆ.
ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ರಾತ್ರಿ 11 ರ ತನಕವೂ ಭಕ್ತರಿಗೆ ರಾಮನ ದರ್ಶನ ಸಿಗಲಿದೆ.
ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿತ್ತು ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತಿದೆ.
ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರಿದ್ದಾರೆ
ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ.