Mon. Dec 23rd, 2024

ಬಿಎಂಟಿಸಿ ಬಸ್ ಕಿಟಕಿ ತೆರೆಯುವ ವಿಚಾರದಲ್ಲಿ ನಾರಿಯರ ಚಪ್ಪಲಿ ಹೊಡೆದಾಟ

Share this with Friends

ಬೆಂಗಳೂರು,ಫೆ.8: ಕಿಟಕಿ ತೆಗೆಯುವ ವಿಚಾರಕ್ಕೆ ಬಿಎಂಟಿಸಿ ಬಸ್ ನಲ್ಲಿ ಮಹಿಳೆಯರಿಬ್ಬರು ಚಪ್ಪಲಿಯಿಂದ ಹೊಡೆದಾಡಿದ ಹೇಯ ಪ್ರಸಂಗ ನಡೆದಿದೆ.

ಶಕ್ತಿ ಯೋಜನೆಯಡಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆದಾಗಿನಿಂದ ಸೀಟಿಗಾಗಿ ಹೊಡೆದಾಡಿ ಸುದ್ದಿಯಾದ ಮಹಿಳೆಯರು ಈಗ ಸೆಕೆಗೆ ಕಿಟಕಿ ತೆಗೆಯುವ ವಿಚಾರದಲ್ಲಿ ಚಪ್ಪಲಿಯಿಂದ ಹೊಡೆದುಕೊಂಡ ವಿಲಕ್ಷಣ ಪ್ರಸಂಗದಿಂದ ಮತ್ತೆ ಸುದ್ದಿಯಾಗಿದ್ದಾರೆ.

ಇಬ್ಬರು ಮಹಿಳೆಯರು ಶೂ ಮತ್ತು ಚಪ್ಪಲಿಯಿಂದ ಹೊಡೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೆಜೆಸ್ಟಿಕ್ ನಿಂದ ರಾಜಾಜಿ ನಗರ ಮಾರ್ಗವಾಗಿ ಪೀಣ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಬಸ್ ನ ವಿಂಡೋ ತೆಗೆಯುವ ವಿಚಾರಕ್ಕೆ ಇಬ್ಬರು ಮಹಿಳೆಯರು ಜಗಳ ಪ್ರಾರಂಭಿಸಿದ್ದಾರೆ, ಅದು ಅತಿರೇಕಕ್ಕೆ‌ ತಿರುಗಿ ಚಪ್ಪಲಿಯಿಂದ ಇಬ್ಬರೂ ಹಲ್ಲೆ ಮಾಡಿಕೊಂಡಿದ್ದಾರೆ.

ಬಸ್ ನಲ್ಲಿ ಮಹಿಳೆಯರ ಹೊಡೆದಾಟ ಕಂಡು ಇತರೆ ಪ್ರಯಾಣಿಕರು ಮುಜುಗರಕ್ಕೆ ಒಳಗಾಗಬೇಕಾಯಿತು.

ಹೊಡೆದಾಡಿದ ಇಬ್ಬರೂ ಮಹಿಳೆಯರನ್ನು ಬಸ್ ನಿಂದ ಕೆಳಗಿಳಿಸುವಂತೆ ಕೆಲ ಪ್ರಯಾಣಿಕರು‌ ಕಂಡಕ್ಟರ್ ಗೆ‌ ಆಗ್ರಹಿಸಿದರು.

ಹತ್ತು,ಹದಿನೈದು ನಿಮಿಷದ ಪ್ರಯಾಣಕ್ಕೆ ಇಷ್ಟೆಲ್ಲಾ ಅವಾಂತರ‌ ಬೇಕಿತ್ತಾ,ಇಂತವರಿಂದ‌ ಇಡೀ ಮಹಿಳಾ‌ ಕುಲಕ್ಕೆ‌ ಕಳಂಕ ಎಂದು ಹಿರಿಯ ನಾಗರೀಕರು ಬೇಸರದಿಂದ ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂದಿತು.


Share this with Friends

Related Post