Tue. Dec 24th, 2024

ಆಪರೇಷನ್ ಕಾಡಾನೆ‌ ಸಕ್ಸಸ್:ಕರಡಿ ಆನೆ ಸೆರೆ

Share this with Friends

ಹಾಸನ,ಏ.18: ಮೊದಲ ದಿನವೇ ಕರಡಿ ಹೆಸರಿನ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.

ಜಿಲ್ಲೆಯ ಬೇಲೂರು ತಾಲೂಕಿನ ವಾಟೀಹಳ್ಳಿ ಗ್ರಾಮದ ಐಬಿಸಿ ಎಸ್ಟೇಟ್ ನಲ್ಲಿ ನರಹಂತಕ ಕಾಡಾನೆ ಕರಡಿ ಸೆರೆ ಸಿಕ್ಕಿದೆ.

ಸಾಕಾನೆಗಳಾದ ಅಶ್ವತ್ಥಾಮ, ಅಭಿಮನ್ಯು, ಧನಂಜಯ, ಹರ್ಷ,ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮಾ, ಮಹೇಂದ್ರ ಸಾಕಾನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ತಂಡ ಕಾಡನೆಗೆ ಅರವಳಿಕೆ ಚುಚ್ಚುಮದ್ದು ನೀಡಿತು.

ಅರ್ಧ ಗಂಟೆ ನಂತರ ಪ್ರಜ್ಞೆ ತಪ್ಪಿ ಬಿದ್ದ ಕರಡಿ ಆನೆಯನ್ನು ಸೆರೆ ಹಿಡಿಯಲಾಗಿದ್ದು ಎಂಟು ಸಾಕಾನೆಗಳ ತಂಡದ ನೇತೃತ್ವವನ್ನು ಅಭಿಮನ್ಯು ವಹಿಸಿಕೊಂಡಿದ್ದ.

ಇದೇ ಕರಡಿ ಕಾಡಾನೆ ಕಳೆದ 2024ರ ಜನವರಿ 4ರಂದು ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ ಎಂಬಾತನನ್ನು ಬಲಿ ಪಡೆದಿತ್ತು. ಇದಾದ ಬಳಿಕ ಐವರ ಮೇಲೆ ಇದು ದಾಳಿ ನಡೆಸಿ ಆತಂಕ ಸೃಷ್ಟಿ ಮಾಡಿತ್ತು.

ಜಿಲ್ಲೆಯಲ್ಲಿ ಕಳೆದ ಹಲವಾರು ತಿಂಗಳಿಂದ ಉಪಟಳ‌ ನೀಡುತ್ತಿರುವ ಐದು ಪುಂಡಾನೆಗಳನ್ನು ಸೆರೆ ಹಿಡಿದು ರೆಡಿಯೋ‌ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ನೀಡಿದೆ,ಹಾಗಾಗಿ ಸಧ್ಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.


Share this with Friends

Related Post