Wed. Dec 25th, 2024

ಮೊದಲ ಹಂತದ ಲೋಕಸಭಾ ಚುನಾವಣೆ: ಗಣ್ಯರ ಮತದಾನ

Share this with Friends

ನವದೆಹಲಿ,ಏ.19: ಲೋಕಸಭಾ ಮೊದಲ ಹಂತದ ಚುನಾವಣೆ ಶುರುವಾಗಿದ್ದು 102 ಸ್ಥಾನಗಳಿಗೆ ಮತದಾನ ನಡೆದಿದೆ.

ಇಂದು 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಹಲವು ಗಣ್ಯರು ಮತದಾನದ ಮಾಡಿದರು.

ಸೂಪರ್ ಸ್ಟಾರ್ ಗಳಾದ ರಜಿನಿಕಾಂತ್,ಕಮಲ ಹಾಸನ್‌, ಈಶಾ ಪೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌, ಅಜಿತ್‌ ಕುಮಾರ್‌, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕೇಂದ್ರ ಸಚಿವ ಗಡ್ಕರಿ, ಸಚಿವ ರಾಜವರ್ಧನ ರಾಥೋಡ್‌, ಉತ್ತರಾಖಂಡ್‌ ಸಿಎಂ ಪುಷ್ಕರ್‌ ಸಿಂಗ್‌, ಮಣಿಪುರ ಸಚಿವ ಬಿರೇನ್‌ ಸಿಂಗ್‌ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ .

ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿದ್ದು ಸೂಪರ್​ ಸ್ಟಾರ್​ ರಜಿನಿಕಾಂತ್​, ಕಮಲ್​ ಹಾಸನ್​, ವಿಜಯ್​ ಸೇತುಪತಿ ಹಾಗೂ ಧನುಷ್​ ಸೇರಿದಂತೆ ಸ್ಟಾರ್​ ನಟರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ , ನಟ ಧನುಷ್ ಅವರು ಚೆನ್ನೈನ ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ವಿಜಯ್ ಸೇತುಪತಿ, ಕಿಲ್ಪಾಕ್‌ನ ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು. ನಟರಾದ ರಜನಿಕಾಂತ್ ಹಾಗೂ ಕಮಲ್​ ಹಾಸನ್​ ಕೂಡ ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಮಾಡಿದರು.

ಇನ್ನು ಇಶಾ ಫೌಂಡೇಶನ್​ ಸಂಸ್ಥಾಪಕರಾದ ಜಗ್ಗಿ ವಾಸುದೇವ ಅವರು ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ.

ಕಲಾವಿದರಲ್ಲದೆ, ಮಾಜಿ ಐಪಿಎಸ್​ ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ, ತಮಿಳುನಾಡು ಸಿಎಂ ಸ್ಟಾಲಿನ್​ ಮತ್ತು ಸಚಿವ ಉದಯನಿಧಿ ಸ್ಟಾಲಿನ್​ ಕೂಡಾ ತಮ್ಮ ಹಕ್ಕು ಚಲಾಯಿಸಿದರು.


Share this with Friends

Related Post