Wed. Dec 25th, 2024

ರಣ ಬಿಸಿಲಿನ ನಡುವೆಯೂ ಲಕ್ಷ್ಮಣ್ ಚುನಾವಣಾ ಪ್ರಚಾರ

Share this with Friends

ಪಿರಿಯಾಪಟ್ಟಣ,ಏ.19‌‌‌: ‌ಪಿರಿಯಾಪಟ್ಟಣ ಕ್ಷೇತ್ರವ್ಯಾಪ್ತಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ರಣ ಬಿಸಿಲಲ್ಲೂ ಬಿರುಸಿನ ಪ್ರಚಾರ ನಡೆಸಿದರು.

ಸಚಿವ ಕೆ ವೆಂಕಟೇಶ್ ನೇತೃತ್ವದಲ್ಲಿ ಕಂಪಲಾಪುರ ಗ್ರಾಮದಿಂದ ಪ್ರಚಾರ ಆರಂಭಿಸಿದ ಲಕ್ಷ್ಮಣ ಅವರನ್ನು ಜನತೆ ಅಭೂತಪೂರ್ವವಾಗಿ ಸ್ವಾಗತಿಸಿದರು.

ನಂತರ ಕಿರನಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿದರು,ಈ ವೇಳೆ‌ ಸಚಿವರ ಬಳಿ ಜನರು ಕಷ್ಟ ಗಳನ್ನು ಹೇಳಿಕೊಂಡರು.

ಗೆದ್ದ ಬಳಿಕ ನಾನು ನಿಮ್ಮ ಕಷ್ಟಕ್ಕೆ ಪರಿಹಾರ ನೀಡುತ್ತೇನೆ ಎಂದು ಲಕ್ಷ್ಮಣ್ ಹೇಳಿ ಸಚಿವರ ಜೊತೆ ಗೂಡಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ನಂತರ ಬೆಟ್ಟದಪುರ ಗ್ರಾಮಕ್ಕೆ ತೆರಳಿ ಜನಸಭೆ ಕಾರ್ಯಕ್ರಮಕ್ಕೆ ಭಾಗವಹಿಸಿ ಜನರ ಬಳಿ ಮತಯಾಚನೆ ಮಾಡಿದರು.

ಅಲ್ಲಿಂದ ತುಂಗಾ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಲಕ್ಷ್ಮಣ್ ಹಾಗು ಬಿ.ಜೆ ವಿಜಯಕುಮಾರ್ ಅವರನ್ನು ಆರತಿ ಬೆಳಗಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ಈ‌ ವೇಳೆ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರು.

ದೊಡ್ಡಬೇಲಾಳು,ಮಾಕೋಡು ಗ್ರಾಮ,ರಾವಂದೂರು ಗ್ರಾಮ,ಎನ್ ಶೆಟ್ಟಹಳ್ಳಿ,ಹಂಡಿತವಳ್ಳಿ ಗ್ರಾಮ ನಂತರ ಸಚಿವರ ಸ್ವಗ್ರಾಮ ಕಿತ್ತೂರು ಗ್ರಾಮಕ್ಕೆ ಭೇಟಿ ನೀಡಿ ನಿಮ್ಮೆಲ್ಲರ ಸಹಕಾರ ಬೇಕು ದಯಮಾಡಿ ಮತ ನೀಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಾಯಕರ ಕೈ ಬಲ ಪಡಿಸಬೇಕು ಪಕ್ಷವನ್ನು ಗೆಲುವಿನತ್ತ ಸಾಗಿಸಬೇಕು ಎಂದು ಹೇಳಿದರು.

ಸಚಿವರ ಪುತ್ರ ನಿತಿನ್ ಮತ್ತು ಬ್ಲಾಕ್ ಕಾಂಗ್ರೆಸ್ ಹಾಲಿ,ಮಾಜಿ ಅಧ್ಯಕ್ಷರುಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಪದಾಧಿಕಾರಿಗಳು, ಮಾಜಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರುಗಳು,ಗ್ರಾಮದ ಮುಖಂಡರು, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.


Share this with Friends

Related Post