Thu. Dec 26th, 2024

ವರುಣ ದೇವನ ಕೃಪೆಗಾಗಿ ತಲಕಾವೇರಿಯಲ್ಲಿ ಅತಿರುದ್ರ ಯಾಗ

Share this with Friends

ಮಡಿಕೇರಿ,ಏ.20: ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಿ ಕಾವೇರಿ ಕ್ರಿಯಾ ಸಮಿತಿಯ ಹೋರಾಟಗಾರರು ಮಡಿಕೇರಿಯ ತಲಕಾವೇರಿಯಲ್ಲಿ ಅತಿರುದ್ರ ಯಾಗ ಮಾಡಿಸಿದರು.

ಹೋರಾಟಗಾರರು ತಲಕಾವೇರಿಯನ್ನು ತಲುಪಿ, ಕೊಡಗಿನ ಕುಲದೇವಿ ಕಾವೇರಿ ಮಾತೆ, ಅಗಸ್ತ್ಯೇಶ್ವರ ಮತ್ತು ಭಗಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಅತಿ ರುದ್ರಯಾಗ ಪೂಜೆಯನ್ನು ಮಾಡಿಸಿದರು.

ಆದಷ್ಟು ಬೇಗ ವರುಣ ದೇವ ಕೃಪೆ ತೋರಿ ಮಳೆ ಬರಲಿ ಹಾಗೂ ನಮ್ಮ ನಾಡಿನ ಕಾವೇರಿ ನೀರಿನ ಸಮಸ್ಯೆಗೆ ಬೇಗ ಶಾಶ್ವತ ಪರಿಹಾರ ಸಿಗಲಿ ಎಂದು‌ ಪ್ರಾರ್ಥಿಸಿದರು.

ನಮ್ಮ ರಾಜ್ಯದಲ್ಲಿ ನೀರಿಗಾಗಿ ತತ್ತರಿಸುತ್ತಿರುವುದು ನಿಂತು, ಸಮೃದ್ಧವಾಗಿ ಮಳೆ ಆಗಲಿ ಎಂದು ಭಗವಂತನಲ್ಲಿ ಬೇಡಿಕೊಂಡು ವಿಶೇಷ ಪೂಜೆಯನ್ನು ಮಾಡಿಸಲಾಯಿತು.

ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್. ಜೈಪ್ರಕಾಶ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಮೂಗೂರು ನಂಜುಂಡಸ್ವಾಮಿ, ಎಂ. ಜೆ ಸುರೇಶ್ ಗೌಡ, ತೇಜೇಶ್ ಲೋಕೇಶ್ ಗೌಡ, ಸಿನಿಮಾ ನಿರ್ಮಾಪಕ ಚೇತನ್ ರಮೇಶ್, ಸಿಂಧುವಳ್ಳಿ ಶಿವಕುಮಾರ್, ಪ್ರಭುಶಂಕರ್ ಎ.ಸಿ ಬಸಪ್ಪ, ರಾಜಶೇಖರ್ ವರಕೂಡು ಕೃಷ್ಣೇಗೌಡ, ಆಟೋ ಮಾದೇವ್, ಬೋಗಾದಿ ಸಿದ್ದೇಗೌಡ, ಅಶೋಕ್ ,ಪ್ರಭಾಕರ್, ಹನುಮಂತಯ್ಯ, ಸೌಭಾಗ್ಯ ಬೆಳಿಕೆರೆ, ಮಂಜುಳಾ, ಹನುಮಂತೇ ಗೌಡ,ರವೀಶ, ನಾಗರಾಜ್, ಶಿವರಾಂ , ಶ್ರೀನಿವಾಸ, ಕೃಷ್ಣಪ್ಪ ಸೇರಿದಂತೆ ನೂರಾರು ಜನರು ಹಾಜರಿದ್ದರು.


Share this with Friends

Related Post