Thu. Dec 26th, 2024

ನಮ್ಮ ಪೂರ್ವಜರಂತೆ ಜನಸೇವೆ‌ ಮಾಡುವೆ :ಯಧುವೀರ್ ಭರವಸೆ

Share this with Friends

ಮೈಸೂರು, ಏ.20: ನಮ್ಮ ಪೂರ್ವಜರು ಅರಮನೆಯಲ್ಲಿ ಹುಟ್ಟಿದ್ದರೂ ಜನರ ನಡುವೆ ಇದ್ದು ನೆರವಾಗುತ್ತಿದ್ದರು, ನಾವು ಅವರಂತೆಯೇ‌ ಸೇವೆ ಮಾಡುವೆ ಎಂದು‌ ಯದುವೀರ್‌ ತಿಳಿಸಿದರು.

ನಿಮ್ಮ ನಡುವೆ ಇದ್ದು ನಿಮ್ಮ ಸೇವೆ ಮಾಡುತ್ತೇನೆ ನಿಮ್ಮಗಳ ಸೇವೆ ಮಾಡುವುದು ನನ್ನ ಪಾಲಿನ ಸೌಭಾಗ್ಯವೆಂದು ಭಾವಿಸಿದ್ದೇನೆ ಯಾವುದೆ ಅಪಪ್ರಚಾರಗಳಿಗೆ ಕಿವಿಕೊಡದೆ ನನ್ನನ್ನು ಬೆಂಬಲಿಸಿ ಎಂದು ಬಿಜೆಪಿ ಅಭ್ಯರ್ಥಿಯೂ ಆದ‌ ಯದುವೀರ್
ಮತದಾರರಿಗೆ ಆಭಯ ನೀಡಿದರು.

ಯಧುವೀರ್ ಒಡೆಯರ್ ರವರು ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಮತ ಪ್ರಚಾರ ನೆಡೆಸಿದರು.

ಈ ವೇಳೆ ಜಟ್ಟಿಹುಂಡಿ ಗ್ರಾಮದಲ್ಲಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷದಲ್ಲಿ ಮೈಸೂರು ಕೊಡಗು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ , ಜಲಜೀವನ್ ಮಿಷನ್ ಮೂಲಕ ಎರಡುವರೆ ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ , ಪ್ರಾದಾನ ಮಂತ್ರಿ ಅವಾಜ್ ಯೋಜನೆಯ ಮೂಲಕ ಆಶ್ರಯ ಮನೆಗಳು, 41 ಜನ ಔಷದಿ ಕೆಂದ್ರದ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಔಷದಿ ಪೂರೈಕೆ ,ವಂದೇಭಾರತ್ ರೈಲುಗಳ ಸಂಪರ್ಕ, ಹೀಗೆ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದರೊಂದಿಗೆ ಮತ್ತೆ ನಾವು ಮೋದಿಯವರ ಕೈ ಬಲಪಡಿಸಬೇಕಿದೆ ಶ್ರೇಷ್ಠ ಭಾರತದ ನಿರ್ಮಾಣಕ್ಕಾಗಿ ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು

ಈ ವೇಳೆ ಶಾಸಕ ಜಿ.ಟಿ ದೇವೆಗೌಡ, ಬಿಜೆಪಿ ಯುವ ಮುಖಂಡ ಕವೀಶ್ ಗೌಡ ಸೇರಿದಂತೆ ಹಲವು ಮುಖಂಡರು ಯದುವೀರ್ ಗೆ ಸಾಥ್ ನೀಡಿದರು.


Share this with Friends

Related Post