ಮೈಸೂರು, ಏ.20: ಶ್ರೀ ರಾಮನವಮಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಇಂದು ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.
ಇಂದು ಸಂಜೆ ಅರವಿಂದ್ ಮೆಲೋಡೀಸ್ ತಂಡದಿಂದ ಸುಗಮ ಸಂಗೀತ ಮತ್ತು ದೇವರನಾಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಿಂಚನ ಹಾಗೂ ಮನು ಅವರು
ಶಿವ ಶಿವ ಎಂದರೆ ಭಯವಿಲ್ಲ,ಶಿವ ನಾಮಕೆ ಸಾಟಿ ಬೇರಿಲ್ಲಾ,
ಭಾವಗೀತೆ
ಒಳಿತು ಮಾಡು ಮನುಷಾ ನೀ ಇರೋದು ಮೂರೇ ದಿವಸಾ,
ಭಕ್ತಿಗೀತೆ ನಿನ್ನಂತೇ ನಾನಾಗಲಾರೆ ಹನುಮಾ ನಾ ಏನು ಮಾಡಲಿ ಹನುಮಾ,
ಹಾಲಲ್ಲಾದರು ಹಾಕು ನೀರಲ್ಲಾದರೂ ಹಾಕು ರಾಘವೇಂದ್ರಾ,
ಎಲ್ಲಿ ಹನುಮನೊ ಅಲ್ಲೇ ರಾಮನು ರಾಮನ ಉಸಿರೇ ಹನಮಾ,
ಆನಂದಾ ಪರಮಾನಂದಾ ಇವೇ ಮುಂತಾದ ಗೀತೆಗಳನ್ನು ಹಾಡಿ ಎಲ್ಲರ ಮನಸೂರೆಗೊಂಡರು.
ಮನು ಮತ್ತು ಸಿಂಚನಾ ಅವರಿಗೆ ಅರವಿಂದ್ ಸಾಥ್ ನೀಡಿದರು.
ನಂತರ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ,ಮಹಾ ಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.