Wed. Dec 25th, 2024

ಹುಣಸೂರಿನಲ್ಲಿ ಪಾದಯಾತ್ರೆ ಮಾಡಿ ಮತ ಯಾಚಿಸಿದ ಎಂ.ಲಕ್ಷ್ಮಣ್

Share this with Friends

ಹುಣಸೂರು,ಏ.21: ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಹುಣಸೂರಿನ ಗದ್ದಿಗೆ ಶ್ರೀ ಗುರು ಕೆಂಡಗಣ್ಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದರು.

ಈ‌ ವೇಳೆ ಜನತೆ ಹೂವಿನ ಸುರಿಮಳೆ ಸುರಿಸಿ ಶಾಲು ಹೊದಿಸಿ ಪೇಟಾ ತೊಡಿಸಿ ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ರತ್ನಪುರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಆಂಜನೇಯ ಮತ್ತು ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಪಾದಯಾತ್ರೆ ಮೂಲಕ ಗ್ರಾಮದ ಬೀದಿ ಬೀದಿಗೆ ಹೋಗಿ ಮತ ಕೇಳಿದರು.ನಂತರ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಿದರು ಮುಸ್ಲಿಂ ಭಾಂದವರು ಲಕ್ಷ್ಮಣ ರವರಿಗೆ ಜೈಕಾರ ಕೂಗಿ ಸ್ವಾಗತಿಸಿದರು. ಲಕ್ಷ್ಮಣ್ ಮತ ನೀಡುವಂತೆ ಮನವಿ ಮಾಡಿದರು.

ನಂತರ ಬನ್ನಿಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರ ಜೊತೆ ಹಳ್ಳಿಕಟ್ಟೆ ಯಲ್ಲಿ ಭರ್ಜರಿ ಮತಯಾಚನೆ ಮಾಡಿದರು.

ಈ ವೇಳೆ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಮಾತನಾಡಿ, ನಮ್ಮ ಅಭ್ಯರ್ಥಿ ಲಕ್ಷ್ಮಣರವರ ಕೊಡುಗೆ ಅಪಾರ ವಾದುದ್ದು. ಈ ಭಾಗದ ಭೂಮಿ ಇಷ್ಟೋತ್ತಿಗೆಲ್ಲ ಬರಡು ಭೂಮಿ ಯಾಗುತ್ತಿತ್ತು. ನೀವೆಲ್ಲ ಮಾರಿಕೊಂಡು ಹೋಗುವ ಪರಿಸ್ಥಿತಿ ಬರುತ್ತಿತ್ತು. ಈಗಲೂ ನಮ್ಮ ಭಾಗದಲ್ಲಿ ಹಸಿರು ಇದೆ ಎಂದರೆ ಅದಕ್ಕೆ ಕಾರಣ ಕಳೆದ 30 ವರ್ಷದ ಹಿಂದೆ ಲಕ್ಷ್ಮಣ ರವರು ಮಾಡಿದ ಒಂಟಿ ಹೋರಾಟದಿಂದ ಎಂದು ಹೇಳಿದರು.

ಲಕ್ಷ್ಮಣ ರವರು ಮಾತನಾಡಿ, ಈ ಚುನಾವಣೆಯಲ್ಲಿ ಸತ್ಯ ಗೆಲ್ಲುತ್ತದೆ ಸುಳ್ಳು ಸಾಯುತ್ತದೆ. ಪ್ರಪಂಚದಲ್ಲಿ ನಮ್ಮ ದೇಶವನ್ನು ಗುರುತಿಸುತ್ತಿದ್ದಾರೆ ಎಂದರೆ ಜವಾಹರಲಾಲ್ ನೆಹರೂ ಮತ್ತು ಇಂದಿರಾಗಾಂಧಿ ಯವರೆ ಕಾರಣ ಎಂದು ಹೇಳಿದರು.

ನಮ್ಮ ದೇಶ ಇಂದು ಮಂಗಳಯಾನಕ್ಕೆ ಮಿಷನ್ ಕಳುಹಿಸುತ್ತಿದೆ,ಅದೆಲ್ಲ ಸಾಧ್ಯವಾಗಿದ್ದು ರಾಜೀವ್ ಗಾಂಧಿಯವರು ತಂದಂತಹ ಟೆಕ್ನಾಲಜಿಯಿಂದ ಎಂದು ಸ್ಮರಿಸಿದರು.

ಬ್ಲಾಕ್ ಕಾಂಗ್ರೆಸ್ ಹಾಲಿ,ಮಾಜಿ ಅಧ್ಯಕ್ಷರುಗಳು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳು, ಪದಾಧಿಕಾರಿಗಳು, ಮಾಜಿ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರುಗಳು ಗ್ರಾಮದ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.


Share this with Friends

Related Post