Wed. Dec 25th, 2024

ಪಂಚವಟಿಯಲ್ಲಿ ರಾಮನವಮಿ ಪ್ರಯುಕ್ತ ಭರತನಾಟ್ಯ ಪ್ರದರ್ಶನ

Share this with Friends

ಮೈಸೂರು, ಏ.21: ಶ್ರೀ ರಾಮನವಮಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಇಂದು ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಜೆ ಮೈಸೂರಿನ ಮಾರ್ವೆಲ್ ಕಾಲೇಜು ವಿದ್ಯಾರ್ಥಿನಿಯರಾದ ಸಂಜನಾ ಹಿರೇಮಠ್ ಮತ್ತು ತೇಜಸ್ವಿನಿ ಎಸ್ ಅವರಿಂದ ಭರತನಾಟ್ಯ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.

ನಂತರ ರೂಪಾ ಹಿರೇಮಠ್ ಓಂಕಾರ ಗಣಪತಿ ಶರಣು ಎಂಬ ಭಕ್ತಿಗೀತೆ ಹಾಡಿ ರಂಜಿಸಿದರು

ಆ ನಂತರ ಮಾರ್ವೆಲ್ ಕಾಲೇಜಿನ ಗಂಧರ್ವಿನಿ ಎಂಬ ವಿದ್ಯಾರ್ಥಿನಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ‌‌ ರಾಮಾ ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮಾ,ರಾಮಾ ಎಂಬ ಭಕ್ತಿಗೀತೆ ಹಾಡಿ ಎಲ್ಲರ ಮೆಚ್ಚುಗೆ ಪಡೆದರು.

ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲರಿಗೂ ಹಾಗೂ ಸೇವಾರ್ಥದಾರರಿಗೆ ದೇವಾಲಯದ ಗಿಣಿಸ್ವಾಮಿ ಅವರು ಧನ್ಯವಾದ ಸಲ್ಲಿಸಿದರು.

ನಂತರ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ,ಮಹಾ ಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.


Share this with Friends

Related Post