Wed. Dec 25th, 2024

ಲಕ್ಷ್ಮಣ್ ಗೆಲುವಿಗೆ ಹಗಲಿರುಳು ಶ್ರಮಿಸಿ: ಹರೀಶ್ ಗೌಡ ಮನವಿ

Share this with Friends

ಮೈಸೂರು, ಏ.22: ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಶಾಸಕ ಕೆ. ಹರೀಶ್ ಗೌಡ ಮನವಿ ಮಾಡಿದರು

ನನ್ನ ಬೂತ್ ನನ್ನ ಜವಾಬ್ದಾರಿ, ಘೋಷವಾಕ್ಯದೊಂದಿಗೆ
ನಗರದ ಗೋಕುಲಮ್ ಬಡಾವಣೆಯಲ್ಲಿ ಬೂತ್ ಮಠದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲುವಿಗೆ ಸೇನಾನಿಗಳಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ವರ್ಗದವರಿಗೆ ಅನುಕೂಲ ಆಗುವಂತಹ 5 ಗ್ಯಾರಂಟಿಗಳನ್ನು ನೀಡಿದೆ, ಸದಾ ದಲಿತರು, ಬಡವರು, ಶೋಷಿತರ ಪರವಾದ ಪಕ್ಷ, ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಮಾತನಾಡಿ,ಪ್ರತಿಯೊಂದು ಬೂತ್ ಜವಾಬ್ದಾರಿಯನ್ನು ತೆಗೆದುಕೊಂಡ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಗೋಕುಲಂ ವಾರ್ಡ್ ಅಧ್ಯಕ್ಷ ದಿನೇಶ್, ಮುಖಂಡ ಸೀನಪ್ಪ, ಮಹಿಳಾ ಅಧ್ಯಕ್ಷೆ ಗಿರಿಜಮ್ಮ, ಎಸ್ ಸಿ ಘಟಕದ ಮುಖಂಡರಾದ ರಾಮು, ಚಂದ್ರಶೇಖರ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.


Share this with Friends

Related Post