Wed. Dec 25th, 2024

ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ : ಆರ್ ಪರಮೇಶ್ ಸಲಹೆ

Share this with Friends

ಮೈಸೂರು,ಏ.22: ನಿರ್ಭೀತಿಯಿಂದ ಯೋಗ್ಯ ವ್ಯಕ್ತಿಗೆ ಮತ ನೀಡುವ ಮೂಲಕ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬೇಕು ಎಂದು ಸಮಾಜ ಸೇವಕ ಆರ್. ಪರಮೇಶ್ ಹೇಳಿದರು.

ನಗರದ ರೈಲ್ವೆ ನಿಲ್ದಾಣ ಮುಂಭಾಗ ವೀರ ಸಾವರ್ಕರ್ ಯುವ ಬಳಗದ ವತಿಯಿಂದ
ಪ್ರಯಾಣಿಕರಿಗೆ ಕಡ್ಡಾಯ ಮತದಾನದ ಜಾಗೃತಿಯ ಕರಪತ್ರ ನೀಡಿ ಮತದಾನ ಜಾಗೃತಿ ಬಗ್ಗೆ ಅರಿವು ಮೂಡಿಸಿ ಅವರು ಮಾತನಾಡಿದರು.

ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರು ಮತದಾನ ಮಾಡಬೇಕು. ವಿದ್ಯಾವಂತರೇ ಇಂದು ಮತದಾನದಿಂದ ದೂರ ಉಳಿಯುವುದು ಖೇದಕರ ಎಂದು ಬೇಸರಪಟ್ಟರು.

ವೀರ ಸಾವರ್ಕರ್ ಯುವ ಬಳಗದ ಉಪಾಧ್ಯಕ್ಷ ಸಂದೇಶ್, ಸಂಚಾಲಕ ಆರ್ ಪರಮೇಶ್, ಪ್ರಮೋದ್ ಗೌಡ, ಮಧು ಸೋಮಶೇಖರ್, ಸುರೇಂದ್ರ, ಚಂದನ್ ಗೌಡ, ಯೋಗೇಶ್, ಸಚಿನ್ ಹಾಗೂ ಬಳಗದ ಸದಸ್ಯರು ಹಾಜರಿದ್ದರು.


Share this with Friends

Related Post