Wed. Dec 25th, 2024

ಮುಸ್ಲಿಮರು ಓಡಿ ಹೋಗಲೆಂದು ಮಾನಸಿಕವಾಗಿ ಹಿಂಸೆ:ಡಿಸಿಎಂ ಆರೋಪ

Share this with Friends

ಬೆಂಗಳೂರು,ಏ.22: ಬಿಜೆಪಿ ಯವರು ಮುಸ್ಲಿಮರು ಓಡಿ ಹೋಗಲೆಂದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಜುನಾಂಗದ ಶಾಂತಿಯ ತೋಟ ನಮ್ಮದು. ಇವರ ಕೈಯಲ್ಲಿ ಸಂವಿಧಾನ ಬದಲಾವಣೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ‌‌‌ ಹಾಗಂತ ಕ್ರಿಮಿನಲ್ ಗಳಿಗೆ‌ ಮತ್ತು ಅಂತಹ ಪ್ರಕರಣಗಳಿಗೆ ನಾವು ರಕ್ಷಣೆ ಕೊಡುವುದಿಲ್ಲ ಈ ರಾಜ್ಯ ಶಾಂತಿಯಿಂದ ಇದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಜಾಹೀರಾತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ಅಷ್ಟು ಎಚ್ಚರಿಕೆ ಆಗಿದೆಯಲ್ಲಾ ಅಷ್ಟು ಸಾಕು. ಖಾಲಿ ಚೊಂಬು ಇಟ್ಟುಕೊಂಡು ಗೌರವಾನ್ವಿತ ದೇವೇಗೌಡರು ಮೋದಿಗೆ ಹೇಳಿದ್ದಾರೆ.

ನಿಮ್ಮಿಂದ ಇಂಥ ಅನ್ಯಾಯ ಆಯ್ತು ನೀವು ನಮಗೆ ಚೊಂಬು ಕೊಟ್ಬಿಟ್ರಿ, ನಮಗೆ ಮಾತಾಡೋಕೆ ಶಕ್ತಿ ಇಲ್ಲದ ಹಾಗೆ ಆಗಿದೆ ಅಂದಿದ್ದಾರೆ.

ಸಾರ್ವಜನಿಕವಾಗಿ ಏನು ಬೇಕಾದ್ರೂ ಮಾತಾಡಲಿ, ಆದರೆ ಹಿಂದೆ ಕುಮಾರಸ್ವಾಮಿ, ದೇವೇಗೌಡರು ಅನ್ಯಾಯ ಅಗಿದೆ ಅಂತ ಭಾಷಣ ಮಾಡಿದ್ರಲ್ವಾ,ನಾವು ಈಗ ಮೋದಿಗೆ ಪ್ರಶ್ನೆ ಕೇಳಿದ್ದೇವೆ ಅಷ್ಟೆ. ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ ಅವರೇ ನಿರ್ಧರಿಸುತ್ತಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.


Share this with Friends

Related Post