Wed. Dec 25th, 2024

ಯದುವೀರ್, ಜಿ.ಟಿ.ದೇವೇಗೌಡ ರೋಡ್ ಶೋ

Share this with Friends

ಮೈಸೂರು, ಏ.22: ಚಾಮುಂಡೇಶ್ವರಿ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ಯದುವೀರ್ ಮತ್ತು ಜಿ.ಟಿ.ದೇವೇಗೌಡರು ರೋಡ್ ಶೋ ಮೂಲಕ ಮತಯಾಚಿಸಿದರು.

ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಾಗಿದ ರೋಡ್ ಶೋನಲ್ಲಿ ಯದುವೀರ್ ಅಭಿಮಾನಿಗಳು ಪುಷ್ಪ ವೃಷ್ಟಿ ಸುರಿಸಿ ಶುಭ ಕೋರಿದರು.

ಶಾರದಾದೇವಿನಗರದಲ್ಲಿ ಮಹಿಳೆಯರು ಪೂರ್ಣ ಕುಂಭ ಹಿಡಿದು ಸ್ವಾಗತಿಸಿದರೆ‌,ಕೆಲವೆಡೆ ರೋಡ್ ಶೋ ಸಾಗುವ ರಸ್ತೆಯುದ್ದಕ್ಕೂ ರಂಗೋಲಿ ಹಾಕಿದ್ದರು,ಕೆಲವೆಡೆ ಆರತಿ ಬೆಳಗಿ ಶುಭ ಕೋರಿದರು.

ಶಾರದಾ ತ್ರಿಶಾಖಾ ವಿಪ್ರ ಬಳಗದ ಸದಸ್ಯರು ವೇದಘೋಷ ಮೊಳಗಿಸಿ, ಕಮಲದ ಹೂವು ನೀಡಿ ಶುಭ ಕೋರಿದರು, ಭಾವಸಾರ್ ಕ್ಷತ್ರಿಯ ಮರಾಠಿ ಸಂಘ, 24 ಮನೆ ತೆಲುಗು ಶೆಟ್ಟರ ಸಂಘದ ಸದಸ್ಯರು ಅಭ್ಯರ್ಥಿಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು.

ಬಿಜೆಪಿ ಕಾರ್ಯಕರ್ತರ ಜೊತೆ ಜೆಡಿಎಸ್ ಕಾರ್ಯಕರ್ತರು ಸೇರಿ ಒಗ್ಗಟ್ಟಿನ ಪ್ರದರ್ಶನ ನಡೆಸಿದ್ದು ಕ್ಷೇತ್ರದ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸಿತು.

ಶಾಸಕ ಟಿ.ಎಸ್. ಶ್ರೀವತ್ಸ, ಮುಖಂಡರಾದ ಕವೀಶ್ ಗೌಡ, ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸವಿತಾ ಸುರೇಶ್, ಲಕ್ಷ್ಮಿ ಕಿರಣ್, ಆರ್.ಕೆ. ಶರತ್ ಕುಮಾರ್, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಗೌಡ, ವೇದರಾಜ್, ಜೆಡಿಎಸ್ ಮುಖಂಡರಾದ ದಿನೇಶ್, ರಮೇಶ್, ಮಹೇಶ್, ಬಿಜೆಪಿ ಮಹಿಳಾ ಮುಖಂಡರಾದ ರಾಜಮಣಿ, ಲಲಿತಾ, ಕಲಾವತಿ, ವಿನುತಾ ಹಾಗೂ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು.


Share this with Friends

Related Post