Mon. Dec 23rd, 2024

ಸೇಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಿತ ರಕ್ತದಾನ

Share this with Friends

ಮೈಸೂರು, ಏ.23: ಮೈಸೂರಿನ
ಸೇಂಟ್ ಫಿಲೋಮಿನಾ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ‌ 70 ಕ್ಕೂ ಹೆಚ್ಚು ಮಂದಿ ರಕ್ತ ದಾನ ಮಾಡಿದರು.

ಸೇಂಟ್ ಫಿಲೋಮಿನಾ ಕಾಲೇಜು,
ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್ ಮತ್ತು ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಬನ್ನಿಮಂಟಪದಲ್ಲಿರುವ ಸೇಂಟ್ ಫಿಲೋಮಿನಾ ಕಾಲೇಜು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸುಮಾರು 70 ಕ್ಕೂ ಹೆಚ್ಚು ಯುವಕ ಯುವತಿಯರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಈ ವೇಳೆ ಮಾತನಾಡಿದ
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ನಿತ್ಯ ಅನೇಕ ಮಂದಿ ರೋಗಿಗಳು, ಗರ್ಬಿಣಿಯರು, ಅಪಘಾತದಲ್ಲಿ ಗಾಯಗೊಂಡವರು ಸಾವಿಗೀಡಾಗುತ್ತಿದ್ದು, ರಕ್ತದ ಕೊರತೆಯಿಂದ ಜೀವನ್ಮರಣದ ನಡುವೆ ಹೋರಾಟ ನಡೆಸುವವರಿಗೆ ರಕ್ತದಾನದ ಮೂಲಕ ಮರುಜನ್ಮ ನೀಡಿ ಪ್ರತಿಯೊಬ್ಬರು ತಮ್ಮ ಜೀವನವನ್ನು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬೇಸಿಗೆ ಸಂದರ್ಭದಲ್ಲಿ ರಕ್ತದಾನ ಮಾಡುವಲ್ಲಿ ಯಾರು ಮುಂದಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ , ಸೇಂಟ್ ಫಿಲೋಮಿನಾ ಕಾಲೇಜ್ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾಲೇಜಿನ ರೆಕ್ಟರ್ ಮತ್ತು ಮ್ಯಾನೇಜರ್
ಡಾ. ಬರ್ನಾಡ್ ಪ್ರಕಾಶ್,
ಪ್ರಾಂಶುಪಾಲರಾದ ಡಾ. ರವಿ ಜೆಡಿ ಸಲ್ಡಾನ್ಹಾ, ಫ್ರಾನ್ಸಿಸ್ ಡಿಸೋಜ, ದೀಪ್ತಿ, ಎನ್ ಎಸ್ ಎಸ್ ಆಡಳಿತ ಅಧಿಕಾರಿ ಜೋಯಲ್ ಮತ್ತಿತರರು ಹಾಜರಿದ್ದರು.


Share this with Friends

Related Post