Mon. Dec 23rd, 2024

ಮಹಾರಾಜರಿಗೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಶುಭ ಕೋರಿದ ವ್ಯಾಪಾರಿಗಳು

Share this with Friends

ಮೈಸೂರು,ಏ.24: ಲೋಕಸಮರಕ್ಕೆ ಇನ್ನೆರಡೇ ದಿನ ಉಳಿದಿದ್ದು, ಪ್ರಚಾರದ ವಚನ ವೇಳೆ ಬಿಜೆಪಿ ಅಭ್ಯರ್ಥಿ ಯದುವೀರ್ ಅವರನ್ನು ನೋಡಲು ಜನ ಕಾದು ಕುಳಿತ್ತಿದ್ದರು.

ಮೈಸೂರು ಒಡೆಯರ್ ಕುಟುಂಬದ ಕುಡಿ ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮ ಸೇವೆ ಮಾಡಲು ಬಂದಿರುವುದೇ ನಮ್ಮ ಸೌಭಾಗ್ಯ ಎಂದು ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂದಿತು.

ಯದುವೀರ್ ಒಡೆಯರ್ ಅವರಿಗೆ ಸಾಕಷ್ಟು ಜನಪರ ಕಾಳಜಿ ಇದೆ, ಅವರು ಅರಮನೆಯಲ್ಲಿದ್ದುಕೊಂಡೆ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತಲ್ಲಿನ ರಾಗಿದ್ದರು.

ಸಾಕಷ್ಟು ಜನಪರ ಕಾಳಜಿಯುಳ್ಳ ಯದುವೀರ್ ಇಂದು ಬೆಳ್ಳಂ ಬೆಳಗ್ಗೆ ದಿಢೀರನೆ ಎಂ.ಜಿ.ರಸ್ತೆಯ ಮಾರ್ಕೆಟ್ ಗೆ ಭೇಟಿ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯರೊಡನೆ ತೆರಳಿ ಅಲ್ಲಿನ ವ್ಯಾಪಾರಿಗಳ ಬಳಿ ಮತಯಾಚಿಸಿದರು, ಈ ಸಂಧರ್ಭದಲ್ಲಿ ಅಲ್ಲಿನ ವ್ಯಾಪಾರಿಗಳು ಈ ಬಾರಿ ನೀವು ಗೆಲ್ಲಿತೀರಾ ನಿಮ್ಮ ಋಣ ತೀರಿಸುತ್ತೇವೆ , ಬಹಳ ಅಂತರದಿಂದ ಗೆದ್ದೆ ಗೆಲ್ಲುತೀರಾ ಎಂದು ಕುಂಬಳಕಾಯಿ ಯಿಂದ ದೃಷ್ಟಿ ತೆಗೆದು ಹರಿಸಿದ್ದು ವಿಶೇಷವಾಗಿತ್ತು.


Share this with Friends

Related Post