ಮೈಸೂರು,ಏ.25: ಪೊಲೀಸರು, ಬ್ಯಾಂಕ್ ನವರು ಯಾವುದೇ ಕಂಪನಿಗಳ ವಾಟ್ಸಪ್ ಮೆಸೇಜ್ ನಂಬಬಾರದು,ಮೋಸ ಹೋಗಬಾರದು ಎಂದು ಹೇಳುತ್ತಲೇ ಇದ್ದರೂ ಮೋಸ ಹೋಗೋರಂತು ಕಡಿಮೆ ಆಗಿಲ್ಲ.
ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ 19 ಕೋಟಿ ಲಾಭಾಂಶ ತೋರಿಸಿ 99.50 ಲಕ್ಷ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕನಕದಾಸ ನಗರದ ನಿವಾಸಿ ಚಿದಾನಂದ್ ಎಂಬುವರು 99.50 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂ ನಲ್ಲಿ ಬಂದ ಜಾಹಿರಾತಿಗೆ ಆಕರ್ಷಿತರಾದ ಚಿದಾನಂದ್ ಲಿಂಕ್ ಓಪನ್ ಮಾಡಿ ಜಾಯಿನ್ ಆಗಿದ್ದಾರೆ.ಚಿದಾನಂದ್ ಅವರನ್ನ ವಾಟ್ಸಾಪ್ ಗ್ರೂಪ್ ಗೆ ಸೇರಿಸಿ ಲಿಂಕ್ ಕಳುಹಿಸಿ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
ನಂತರ ವಂಚಕರ ಸಲಹೆಯಂತೆ ಪ್ರಾರಂಭದಲ್ಲಿ 60 ಸಾವಿರ ಇನ್ವೆಸ್ಟ್ ಮಾಡಿದ್ದಾರೆ.ಈ ಹೂಡಿಕೆಗೆ 1695 ರೂ ಲಾಭಾಂಶ ಬಂದಿದೆ.ನಂತರ ವಿವಿದ ಹಂತಗಳಲ್ಲಿ ಚಿದಾನಂದ್ 99.50 ಲಕ್ಷ ಹಣ ಹೂಡಿದ್ದಾರೆ.ಕೆಲವೇ ದಿನಗಳಲ್ಲಿ 19 ಕೋಟಿ ಪ್ರಾಫಿಟ್ ತೋರಿಸಲಾಗಿದೆ.
ಹಣ ಡ್ರಾ ಮಾಡಿಕೊಳ್ಳಲು ಮುಂದಾದ ಚಿದಾನಂದ್ ಗೆ ರೆಕಮೆಂಡ್ ಶುಲ್ಕ ಪಾವತಿಸುವಂತೆ ತಿಳಿಸಿದ್ದಾರೆ.ಈ ವೇಳೆ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.