Mon. Dec 23rd, 2024

ಮತ ಮಾರಾಟ ಅಪಾಯ: ಸಿ ಎಸ್ ಚಂದ್ರಶೇಖರ್

Share this with Friends

ಮೈಸೂರು, ಏ.25: ಆಮಿಷಕ್ಕೆ ಮತ ಮಾರಿಕೊಂಡರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಅಧ್ಯಕ್ಷ ಸಿ ಎಸ್ ಚಂದ್ರಶೇಖರ್ ಹೇಳಿದರು.

ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗುಲಾಬಿ ಹಾಗೂ ಮತದಾನದ ಕರೆಯೋಲೆ ನೀಡಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿ ಅವರು ಮಾತನಾಡಿದರು.

ಮತದಾರರು ಜಾಗೃತರಾಗುವ ಮೂಲಕ ಅರ್ಹ ಅಭ್ಯರ್ಥಿಗೆ ಮತ ನೀಡಬೇಕು,
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತ ಚಲಾಯಿಸಬೇಕು‌ ಎಂದು ಕರೆ ನೀಡಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಎಸ್ ಎನ್ ರಾಜೇಶ್, ಚಿನ್ನ ಬೆಳ್ಳಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರು ಸುರೇಶ್ ಗೋಲ್ಡ್ ಚಂದನ್, ಸುರೇಶ್, ಶ್ರೀಕಾಂತ್ ಕಶ್ಯಪ್, ಅನಿಲ್ ಕುಮಾರ್, ಬೈರತಿ ಲಿಂಗರಾಜು, ಮತ್ತಿತರರು ಹಾಜರಿದ್ದರು.


Share this with Friends

Related Post