Mon. Dec 23rd, 2024

ಮತದಾನಕ್ಕೆ ಕ್ಷಣಗಣನೆ:ಸಕಲ ಸಿದ್ದತೆ ಪೂರ್ಣ

Share this with Friends

ಬೆಂಗಳೂರು,ಏ.25: ನಮ್ಮ ರಾಜ್ಯದ 14 ಕ್ಷೇತ್ರಗಳಿಗೆ ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು,ಎಲ್ಲವೂ ಸಜ್ಜಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಒದಗಿಸಲು ಪೊಲೀಸರು ಸಜ್ಜಾಗಿದ್ದಾರೆ.ಹಿರಿಯ ಅಧಿಕಾರಿಗಳು ಎಲ್ಲೆಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಕೆಳ ಹಂತದ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದ್ದಾರೆ.

ಚುನಾವಣೆ ನಡೆಯುವ ಮತಗಟ್ಟೆಗಳಿಗೆ ಬಸ್‌ಗಳ ಮೂಲಕ‌ ಸಿಬ್ಬಂದಿ ತೆರಳಿದರು.ಇದಕ್ಕೂ ಮೊದಲು ತಮ್ಮ,ತಮ್ಮ ಮತಗಟ್ಟೆಗಳನ್ನು ಸಿಬ್ಬಂದಿ ಪರಿಶೀಲಿಸಿ,ಯಾವ ಊರಿಗೆ,ಯಾವ ಮತಗಟ್ಟೆಗೆ ತೆರಳಬೇಕೆಂಬುದನ್ನು ತಿಳಿದುಕೊಂಡರು.

ಇವಿಎಂ ಯಂತ್ರಗಳು ಸಿದ್ದವಾಗಿದ್ದು,ಚುನಾವಣಾ ಅಧಿಕಾರಿಗಳು ಎಲ್ಲಾ ಸರಿಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿ ಧೃಡ ಪಡಿಸಿಕೊಂಡರು.


Share this with Friends

Related Post