Mon. Dec 23rd, 2024

ಅಗಸ್ತ್ರ ಕೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರು,ಪದಾಧಿಕಾರಿಗಳ ಆಯ್ಕೆ

Share this with Friends

ಮೈಸೂರು, ಫೆ.9: ಮೈಸೂರಿನ ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2024-2029ರ ಅವಧಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ‌ ಎಂ. ಡಿ ಗೋಪಿನಾಥ್, ಉಪಾಧ್ಯಕ್ಷರಾಗಿ ಎಂ. ಎನ್. ಸೌಮ್ಯ, ಖಜಾಂಚಿಯಾಗಿ ಕೆ ನಾಗರಾಜ ಅವರು ಅವಿರೋಧವಾಗಿ ಆಯ್ಕೆಯಾದರು.

ಸಂಘದ ರಿಟರ್ನಿಂಗ್ ಅಧಿಕಾರಿ ಬಿ. ರಾಜು ಅವರು ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕ ಮಂಡಲಿ ಸದಸ್ಯರಿಗೆ ಪ್ರಮಾಣಪತ್ರ ನೀಡಿ ಶುಭ ಹಾರೈಸಿದರು.

ಈ‌ ವೇಳೆ ಹಾಲಿ ನಿರ್ದೇಶಕರಾದ ಸಿ. ವಿ ಪಾರ್ಥಸಾರಥಿ, ಪ್ರಶಾಂತ್ ತಾತಾಚಾರ್, ಹೆಚ್. ಎಸ್. ಬಾಲಕೃಷ್ಣ, ಎಂ. ಆರ್. ಚೇತನ್, ಹೆಚ್ ಪಿ. ಪಣಿರಾಜ್,ಮಹಿಮ, ವಿಕ್ರಂ, ನಾಗಶ್ರೀ, ಕೆ ಎನ್ ಅರುಣ್, ಶಿವರುದ್ರಪ್ಪ, ರಾಜಮ್ಮ ಎಸ್. ಶಾಶ್ವತಿ ನಾಯಕ ಎಂ ಪಿ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಜರಿದ್ದರು.


Share this with Friends

Related Post