Mon. Dec 23rd, 2024

ಯುವ ಸಮೂಹ ಸ್ಪರ್ಧಾಯುಗಕ್ಕೆ ಹೊಂದಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಿ:ಎಂ.ಎನ್.ನಟರಾಜ್ ಸಲಹೆ

Share this with Friends

ಮೈಸೂರು, ಫೆ.9: ಸ್ಪರ್ಧಾಯುಗಕ್ಕೆ ಹೊಂದಿಕೊಳ್ಳುವಂತೆ ಯುವ ಸಮೂಹ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.

ಯುವಜನ ಹಾಗೂ ಕ್ರೀಡಾ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ 15 ನೇ ಬುಡಕಟ್ಟು ವಿನಿಮಯ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುಡಕಟ್ಟು ಸಮುದಾಯದವರು ಶಿಕ್ಷಿತರಾಗುವುದೇ ಕಡಿಮೆ,ಹಾಗಾಗಿ ಇಂದಿನ ಶಿಕ್ಷಣ ಕ್ಷೇತ್ರದಲ್ಲಿರುವ ಸವಾಲು ಹಾಗೂ ಸ್ಪರ್ಧೆಗಳನ್ನು ಅರಿತು ನೀವೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾತ್ಮಕ ಮನೋಭಾವನೆ ರೂಡಿಸಿಕೊಳ್ಳಿ ಸಲಹೆ ನೀಡಿದರು.

ಅಭಿಷೇಕ್ ಚವರೆ, ಸಂಜೀವ್ , ಚಿನ್ನಗಿರಿಗೌಡ, ಡಾ.ಲಿಂಗರಾಜು, ಲಕ್ಷ್ಮಿಕಾಂತ್, ಚಿರಂಜೀವಿ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post