Mon. Dec 23rd, 2024

ಎಸ್ಐಟಿ ಮುಂದೆ ಪ್ರಜ್ವಲ್ ರೇವಣ್ಣ ಶರಣಾಗಲಿ: ರೇಖಾ ಆಗ್ರಹ

Share this with Friends

ಮೈಸೂರು,ಏ.30: ಸಂಸದ ಪ್ರಜ್ವಲ್ ರೇವಣ್ಣ ಅವರ ವರ್ತನೆಯನ್ನು
ಮಹಿಳಾ ಕಾಂಗ್ರೆಸ್ ಖಂಡಿಸಿದೆ.

ಪ್ರಜ್ವಲ್ ಅವರ ವರ್ತನೆಯನ್ನು ಖಂಡಿಸಿರುವ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಅವರು ಕೂಡಲೇ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ಆಗ್ರಹಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮಾಡಿರುವ ಈ ಕೃತ್ಯದಿಂದಾಗಿ ಇಡೀ ಕರ್ನಾಟಕದ ಜನತೆ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜ್ವಲ್ ಅವರಿಗೆ ಮಾನಸಿಕ ಅಸ್ವಸ್ಥತೆ ಇರಬಹುದು,ಇಂತಹ ವ್ಯಕ್ತಿಗಳನ್ನು ಸಂಸದರನ್ನಾಗಿ ಮಾಡಿದರೆ ಮುಂದೆ ದೇಶದ ಹೆಣ್ಣು ಮಕ್ಕಳ ಗತಿ ಏನು ಎಂದು ರೇಖಾ ಪ್ರಶ್ನಿಸಿದ್ದಾರೆ.

ಇಂತವರ ಬಗ್ಗೆ ಬಿಜೆಪಿ ಮೌನ ವಹಿಸಿದೆ ಎಂದು ಅವರು ದೂರಿದ್ದಾರೆ.


Share this with Friends

Related Post